Cnewstv.in / 13.4.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಸಚಿವ ಸ್ದಾನಕ್ಕೆ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ : ಸಚಿವ ಕೆ ಎಸ್ ಈಶ್ವರಪ್ಪ.
ಶಿವಮೊಗ್ಗ : ಯಾವುದೇ ಕಾರಣಕ್ಕೂ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಕೆ.ಎಸ್ ಈಶ್ವರಪ್ಪನವರು ತಿಳಿಸಿದ್ದಾರೆ
ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕೆಎಸ್ ಈಶ್ವರಪ್ಪನವರು ಪತ್ರಿಕಾಗೋಷ್ಠಿ ನಡೆಸಿದರು.
ಇದು ಒಂದು ರಾಜಕೀಯ ಷಡ್ಯಂತರ. ನಾನು ರಾಜೀನಾಮೆ ಯಾವುದೇ ಕಾರಣಕ್ಕೂ ಕೊಡುವುದಿಲ್ಲ ಎಂದರು. ಈ ಷಡ್ಯಂತರ ಹಿಂದೆ ಇರುವವರ ಬಗ್ಗೆ ಸಮಗ್ರ ತನಿಖೆಯಾಗಬೇಕು. ನಾನು ಯಾವುದೇ ಕಾರಣಕ್ಕೂ ಹೆದರುವುದಿಲ್ಲ. ನಾಳೆ ಅಥವಾ ನಾಡಿದ್ದು ಸಿಎಂ ಅವರನ್ನು ಭೇಟಿ ಮಾಡುತ್ತೇನೆ. ಕಾಂಗ್ರೆಸ್ನವರು ಯಾವ ಆಧಾರದಲ್ಲಿ ರಾಜೀನಾಮೆ ಕೇಳುತ್ತಿದ್ದಾರೆ ??
ಸಂತೋಷ್ ಡೆತ್ ನೋಟ್ ಬರದೇ ಇಲ್ಲ, ಡೆತ್ ನೋಟ್ ಬರೆದಿದ್ದಾರೆ ಎಂದು ಸುಳ್ಳು ಆರೋಪಗಳನ್ನು ಮಾಡಿ ರಾಜೀನಾಮೆ ನೀಡಬೇಕು ಅಂತ ಕಾಂಗ್ರೇಸ್ ನವರು ಒತ್ತಾಯಿಸುತ್ತಿದ್ದಾರೆ. ಗಣಪತಿಯವರ ಪ್ರಕರಣದಲ್ಲಿ ಅವರು ಸ್ವ ಅಕ್ಷರದಲ್ಲಿ ಡೆತ್ ನೋಟ್ ಬರೆದು ಸಹಿ ಮಾಡಿದ್ರು ಹಾಗೂ ಅ ಡೆತ್ ನೋಟ್ ಅವರ ದೇಹದ ಹತ್ತಿರವೇ ಇತ್ತು. ಆದರೆ ಸಂತೋಷ್ ಪ್ರಕರಣದಲ್ಲಿ ಅವರು ಕೇವಲ ವಾಟ್ಸಪ್ ನಲ್ಲಿ ಟೈಪ್ ಮಾಡಿದ್ದಾರೆ. ಅದು ಅವರೇ ಟೈಪ್ ಮಾಡಿದ್ರಾ ಅಥವಾ ಬೇರೆ ಯಾರಾದರೂ ಮಾಡಿದ್ರಾ ನನಗೆ ಗೊತ್ತಿಲ್ಲ.
ನಾನು ಸಂತೋಷ ಹಾಗೂ ಅವರ ಕುಟುಂಬವನ್ನು ನಾನು ನೋಡಿಲ್ಲ. ಸಂತೋಷ್ ಹೇಗೆ ಸತ್ತಿದ್ದಾರೆ ಅಂತ ತನಿಖೆಯಾಗಬೇಕು. ಸುಮ್ಮನೆ ಆರೋಪ ಮಾಡಿದರೆ ನಾವು ನಂಬಬೇಕಾ ಎಂದರು.
ಇದನ್ನು ಒದಿ : https://cnewstv.in/?p=9404
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
C News TV Kannada News Online in cnewstv