Cnewstv.in / 13.4.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಸಂತೋಷ್ ಡೆತ್ ನೋಟ್ ಬರೆದಿಲ್ಲ : ಸಚಿವ ಕೆ.ಎಸ್ ಈಶ್ವರಪ್ಪ.
ಶಿವಮೊಗ್ಗ : ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕೆಎಸ್ ಈಶ್ವರಪ್ಪನವರು ಪತ್ರಿಕಾಗೋಷ್ಠಿ ನಡೆಸಿದರು.
ಸಂತೋಷ್ ಡೆತ್ ನೋಟ್ ಬರದೇ ಇಲ್ಲ, ಡೆತ್ ನೋಟ್ ಬರೆದಿದ್ದಾರೆ ಎಂದು ಸುಳ್ಳು ಆರೋಪಗಳನ್ನು ಮಾಡಿ ರಾಜೀನಾಮೆ ನೀಡಬೇಕು ಅಂತ ಕಾಂಗ್ರೇಸ್ ನವರು ಒತ್ತಾಯಿಸುತ್ತಿದ್ದಾರೆ.
ಗಣಪತಿಯವರ ಪ್ರಕರಣದಲ್ಲಿ ಅವರು ಸ್ವ ಅಕ್ಷರದಲ್ಲಿ
ಡೆತ್ ನೋಟ್ ಬರೆದು ಸಹಿ ಮಾಡಿದ್ರು ಹಾಗೂ ಅ ಡೆತ್ ನೋಟ್ ಅವರ ದೇಹದ ಹತ್ತಿರವೇ ಇತ್ತು. ಆದರೆ ಸಂತೋಷ್ ಪ್ರಕರಣದಲ್ಲಿ ಅವರು ಕೇವಲ ವಾಟ್ಸಪ್ ನಲ್ಲಿ ಟೈಪ್ ಮಾಡಿದ್ದಾರೆ. ಅದು ಅವರೇ ಟೈಪ್ ಮಾಡಿದ್ರಾ ಅಥವಾ ಬೇರೆ ಯಾರಾದರೂ ಮಾಡಿದ್ರಾ ನನಗೆ ಗೊತ್ತಿಲ್ಲ. ಇದನ್ನು ಡೆತ್ ನೋಟ್ ಅಂತ ಹೇಗೆ ಪರಿಗಣಿಸಲಾಗುತ್ತದೆ ಎಂದರು.
ಇದನ್ನು ಒದಿ : https://cnewstv.in/?p=9402
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
C News TV Kannada News Online in cnewstv