Breaking News

NSUI ವತಿಯಿಂದ ಪಂಜಿನ ಮೆರವಣಿಗೆ ಮೂಲಕ ಸಚಿವರ ಕಚೇರಿ ಮುತ್ತಿಗೆ ಯತ್ನ..

Cnewstv.in / 12.4.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

NSUI ವತಿಯಿಂದ ಪಂಜಿನ ಮೆರವಣಿಗೆ ಮೂಲಕ ಸಚಿವರ ಕಚೇರಿ ಮುತ್ತಿಗೆ ಯತ್ನ..

ಶಿವಮೊಗ್ಗ : ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಶ್ವರಪ್ಪನವರೇ ನೇರ ಕಾರಣ ಎಂದು ಆಪಾದಿಸಿ ಜಿಲ್ಲಾ NSUI ವತಿಯಿಂದ ಪಂಜಿನ ಮೆರವಣಿಗೆ ನಡೆಸಲಾಯಿತು.

ಶಿವಪ್ಪ ನಾಯಕ ವೃತ್ತ ದಿಂದ ಸಚಿವ ಕೆಎಸ್ ಈಶ್ವರಪ್ಪನವರ ಕಚೇರಿಯ ವರೆಗೂ ಪಂಜಿನ ಮೆರವಣಿಗೆಯ ಮೂಲಕ ಹೊರಟು ಮುತ್ತಿಗೆ ಹಾಕಲು ಯತ್ನಿಸಿದರು. ಅದರೆ ಪೋಲಿಸರು ಮಧ್ಯದಲ್ಲಿ ಮುತ್ತಿಗೆಯನ್ನು ತಡೆದರು. ಈ ವೇಳೆ ಈಶ್ವರಪ್ಪನವರ ಅಣುಕು ಪ್ರದರ್ಶನ ಮಾಡಿ ಅವರ ಕೈಗಳಿಗೆ ಕೋಳ ತೊಡಿಸಿ ಕರೆದುಕೊಂಡು ಹೋಗಲಾಯಿತು.

ಪ್ರತಿಭಟನೆಯಲ್ಲಿ NSUI ಮಧು, ಚೇತನ್ ಕೆ, ಎನ್ ರಮೇಶ್ ಮಹಾನಗರಪಾಲಿಕೆ ವಿರೋಧಪಕ್ಷದ ನಾಯಕಿ ಯಮುನಾ ರಂಗೇಗೌಡ, ಪಾಲಿಕೆ ಸದಸ್ಯರಾದ ರಮೇಶ್ ಹೆಗಡೆ ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು

ಇದನ್ನು ಒದಿ : https://cnewstv.in/?p=9379

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*