Breaking News

ಚಿರತೆ ದಾಳಿಯಿಂದ ಮಾಲೀಕನನ್ನು ರಕ್ಷಿಸಿದ ಸಾಕುನಾಯಿ.

Cnewstv.in / 10.4.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಚಿರತೆ ದಾಳಿಯಿಂದ ಮಾಲೀಕನನ್ನು ರಕ್ಷಿಸಿದ ಸಾಕುನಾಯಿ.

ಶಿವಮೊಗ್ಗ : ಚಿರತೆ ದಾಳಿಗೆ ತುತ್ತಾಗುತ್ತಿದ್ದ ಮಾಲೀಕನನ್ನು ಸಾಕುನಾಯಿಗಳು ರಕ್ಷಿಸಿದ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಆನವಟ್ಟಿ ಸಮೀಪ ನಡೆದಿದೆ.

ಬಂಗಾರಪ್ಪ ಎಂಬುವವರು ತನ್ನ ಸಾಕುನಾಯಿಗಳ ಜೊತೆಯಲ್ಲಿ ಕಾಡಿಗೆ ಸೌದೆ ತರಲು ಹೋದಾಗ ಚಿರತೆ ದಾಳಿ ನಡೆಸಿದೆ. ಚಿರತೆ ದಾಳಿ ನಡೆಸುತ್ತಿದ್ದಂತೆ ಸಾಕುನಾಯಿಗಳು ಚಿರತೆಯ ಮೇಲೆ ಪ್ರತಿದಾಳಿ ನಡೆಸಿ, ಮಾಲೀಕನ ಪ್ರಾಣವನ್ನು ಉಳಿಸಿದೆ.

ಚಿರತೆ ದಾಳಿಯಿಂದಾಗಿ ಬಂಗಾರಪ್ಪನವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರೆ ಯಾವುದೇ ರೀತಿಯಾದಂತಹ ಪ್ರಾಣಾಪಾಯವಾಗಿಲ್ಲ. ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತ ತಪ್ಪಿದೆ.

ಇದನ್ನು ಒದಿ : https://cnewstv.in/?p=9352

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*