Cnewstv.in / 10.4.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
kashmiri pandit Returns : 2100 ಪಂಡಿತರು ಕಾಶ್ಮೀರಕ್ಕೆ ವಾಪಸ್..
ನವದೆಹಲಿ : ಕಾಶ್ಮೀರಿ ಮಾತನಾಡುವ ಕಾಶ್ಮೀರದಿಂದ ವಲಸೆ ಹೋಗಿದ್ದ ಹಿಂದೂ ಪಂಡಿತರು ಸಂವಿಧಾನದ 370ನೇ ವಿಧಿ ರದ್ದತಿ ನಂತರ ಕಾಶ್ಮೀರಕ್ಕೆ ಮರಳಿದ್ದಾರೆ.
2019ರ ಆಗಸ್ಟ್ ನಿಂದ ಕಾಶ್ಮೀರದಲ್ಲಿ ನಾಲ್ವರು ಕಾಶ್ಮೀರಿ ಪಂಡಿತರು ಸೇರಿದಂತೆ 14 ಜನರನ್ನ ಕೊಂದಿದ್ದು, ಕಾಶ್ಮೀರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಸದಸ್ಯರನ್ನು ಭಯೋತ್ಪಾದಕರು ಗುರಿಯಾಗಿಸಿಕೊಂಡಿದ್ದರು.
1990 ರಲ್ಲಿ ಸುಮಾರು 55 ಸಾವಿರ ಕಾಶ್ಮೀರಿ ಪಂಡಿತರ ಕುಟುಂಬಗಳು ತಮ್ಮ ಪೂರ್ವಜರ ಮನೆಗಳನ್ನು ತೊರೆದು ಜಮ್ಮು ಸುತ್ತಮುತ್ತ ವಲಸೆ ಹೋಗಿದ್ದರು.
ಸರ್ಕಾರವು 2020-21ರಲ್ಲಿ ಸಮುದಾಯವನ್ನು ಹಿಂದಿರುಗಲು ಪ್ರೋತ್ಸಾಹಿಸಲು ವಿವಿಧ ಇಲಾಖೆಗಳಲ್ಲಿ 841 ಕಾಶ್ಮೀರಿ ಪಂಡಿತರನ್ನು ನೇಮಿಸಿಕೊಂಡಿದೆ ಮತ್ತು 2021-22ರಲ್ಲಿ 1,264 ನೇಮಕಾತಿಗಳನ್ನು ಮಾಡಲಾಗಿದೆ. ಈವರೆಗೂ 2,828 ವಲಸಿರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, 1,913 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಇನ್ನೂ 915 ಮಂದಿಯ ದಾಖಲೆಗಳ ಪರಿಶೀಲನೆ ಕಾರ್ಯ ನಡೆಯಬೇಕಿದೆ.
ಇದನ್ನು ಒದಿ : https://cnewstv.in/?p=9349
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments