Breaking News

ಕೋವಿಡ್ ಬೂಸ್ಟರ್‌ ಡೋಸ್‌ ಬೆಲೆ ಇಳಿಕೆ.

Cnewstv.in / 9.4.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಕೋವಿಡ್ ಬೂಸ್ಟರ್‌ ಡೋಸ್‌ ಬೆಲೆ ಇಳಿಕೆ.

ನವದೆಹಲಿ : ಕೋವಿಡ್ ಬೂಸ್ಟರ್‌ ಡೋಸ್‌ ಬೆಲೆ ಇಳಿಕೆ ಮಾಡಲಾಗಿದೆ ಎಂದು ಪ್ರಮುಖ ಲಸಿಕೆ ತಯಾರಕ ಕಂಪನಿಗಳಾದ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‌ಐಐ) ಮತ್ತು ಭಾರತ್ ಬಯೋಟೆಕ್ ತಿಳಿಸಿದೆ.

ಕೇಂದ್ರ ಸರ್ಕಾರದೊಂದಿಗಿನ ಚರ್ಚೆಯ ನಂತರ, ಖಾಸಗಿ ಆಸ್ಪತ್ರೆಗಳಿಗೆ ಕೋವಿಶೀಲ್ಡ್ ಲಸಿಕೆ ದರವನ್ನು ಪ್ರತಿ ಡೋಸ್‌ಗೆ 600 ರಿಂದ 225 ರೂಪಾಯಿಗಳಿಗೆ ಇಳಿಸಲು ಸೆರಂ ನಿರ್ಧರಿಸಿದೆ ಎಂದು ಎಸ್ಐಐ ಸಿಇಒ ಆದರ್ ಪೂನಾವಾಲ ಅವರು ಟ್ವೀಟ್‌ ಮಾಡಿದ್ದಾರೆ.

ಕೇಂದ್ರ ಸರ್ಕಾರದೊಂದಿಗೆ ಸಮಾಲೋಚಿಸಿ, ಕೋವ್ಯಾಕ್ಸಿನ್ ಬೆಲೆಯನ್ನು ಖಾಸಗಿ ಆಸ್ಪತ್ರೆಗಳಿಗೆ 1,200 ರೂ.ಗಳಿಂದ 225 ರೂಪಾಯಿಗೆ ಕಡಿತಗೊಳಿಸಲು ನಿರ್ಧರಿಸಿದ್ದೇವೆ ಎಂದು ಭಾರತ್ ಬಯೋಟೆಕ್ ಸಹ-ಸಂಸ್ಥಾಪಕಿ ಸುಚಿತ್ರಾ ಎಲಾ ಟ್ವೀಟ್‌ ಮಾಡಿದ್ದಾರೆ.

ಇನ್ನೂ ಮುಂದೆ ಈ ಎರಡೂ ಲಸಿಕೆಗಳು ಒಂದು ಡೋಸ್‌ಗೆ 225 ರೂ. ನಿಗದಿ ಪಡಿಸಲಾಗಿದೆ.

ಇದನ್ನು ಒದಿ : https://cnewstv.in/?p=9331

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*