Cnewstv.in / 9.4.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಮತ್ತೆ ಕೊರೊನಾ !!! ..ಕೇಂದ್ರ ಸರ್ಕಾರದ ಎಚ್ಚರಿಕೆ…
ನವದೆಹಲಿ : ಮಹಾಮಾರಿ ಕೊರೊನಾ ಮತ್ತೆ ರಾಜ್ಯದಲ್ಲಿ ಕಾಣಿಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರದ ಎಚ್ಚರಿಕೆ ನೀಡಿದೆ.
ಚೀನಾ, ಅಮೆರಿಕ ಮತ್ತು ಯುರೋಪ್ ನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿದೆ.
ಭಾರತದಲ್ಲಿನ ಕೆಲವು ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದು, ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.
ಕೇರಳ, ದೆಹಲಿ, ಮಿಜೋರಾಂ, ಮಹಾರಾಷ್ಟ್ರ,ಮತ್ತು ಹರ್ಯಾಣ ರಾಜ್ಯಗಳಿಗೆ ಕೇಂದ್ರ ಸರ್ಕಾರ ಕೋವಿಡ್ ಪ್ರಕರಣ ಹೆಚ್ಚಳವಾಗುತ್ತಿದೆ. ದೇಶದ ಕೋವಿಡ್ ಪ್ರಕರಣಗಳಲ್ಲಿನ ಶೇ.31.08ರಷ್ಟು ಸೋಂಕು ಕೇರಳದಲ್ಲಿ ಪತ್ತೆಯಾಗಿದೆ.
ಕೋವಿಡ್ ಪ್ರಕರಣಗಳು…
ಕೇರಳ : ಕೋವಿಡ್ ಪ್ರಕರಣಗಳು 2,321.. ಪಾಸಿಟಿವಿಟಿ ದರ ಶೇ.13.45 ರಿಂದ ಶೇ.15.53ಕ್ಕೆ ಏರಿಕೆಯಾಗಿದೆ.
ದೆಹಲಿ : ಕೋವಿಡ್ ಪ್ರಕರಣಗಳು 826… ಪಾಸಿಟಿವಿಟಿ ದರ ಶೇ.0.51ರಿಂದ ಶೇ.1.25ಕ್ಕೆ ಹೆಚ್ಚಳವಾಗಿದೆ.
ಹರ್ಯಾಣ : ಕೋವಿಡ್ ಪ್ರಕರಣಗಳು 416.. ವಾರದ ಪಾಸಿಟಿವಿಟಿ ದರ ಶೇ.1.06ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರ : ಕೋವಿಡ್ ಪ್ರಕರಣಗಳು 794…
ವಾರದ ಪಾಸಿಟಿವಿಟಿ ದರ ಶೇ.0.43ಕ್ಕೆ ಏರಿಕೆಯಾಗಿದೆ.
ಮಿಜೋರಾಂ : ಕೋವಿಡ್ ಪ್ರಕರಣಗಳು 814 ಪ್ರಕರಣಗಳು. ವಾರದ ಪಾಸಿಟಿವಿಟಿ ದರ ಶೇ.16.48ಕ್ಕೆ ಏರಿಕೆಯಾಗಿದೆ.
ಇದನ್ನು ಒದಿ : https://cnewstv.in/?p=9316
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments