Breaking News

ನೊಂದವರ ದನಿಯಾಗಿ ಹರ್ಷ ಚಾರಿಟೇಬಲ್ ಟ್ರಸ್ಟ್ ಆರಂಭ.

Cnewstv.in / 9.4.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ನೊಂದವರ ಧ್ವನಿಯಾಗಿ ಹರ್ಷ ಚಾರಿಟೇಬಲ್ ಟ್ರಸ್ಟ್ ಆರಂಭ.

ಶಿವಮೊಗ್ಗ : ನಗರದಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ನಂತರ ಅವರ ಕುಟುಂಬಕ್ಕೆ ಅನೇಕ ಹಿಂದುಬಾಂಧವರು, ಮಠಾಧಿಪತಿಗಳು, ಜನಪ್ರತಿನಿದಿಗಳು, ಸಂಘ ಸಂಸ್ಥೆಗಳು, ಸರ್ಕಾರವು ಆರ್ಥಿಕವಾಗಿ, ಸಾಮಾಜಿಕವಾಗಿ ನೆರವಾಗಿ ಬೆಂಬಲಕ್ಕೆ ನಿಂತಿದ್ದವು. ಅ ಹಣವನ್ನು ನೊಂದವರ ಧ್ವನಿಯಾಗಿ ಹರ್ಷ ಚಾರಿಟೇಬಲ್ ಟ್ರಸ್ಟ್ ಮೂಲಕ ಬಳಸಲು ಹರ್ಷ ಕುಟುಂಬ ಮುಂದಾಗಿದೆ.

ಹರ್ಷನ ಹಂಚಿಕೊಳ್ಳುತ್ತಿದ್ದ ಅವನ ಕನಸುಗಳನ್ನು ತಾಯಿ ಶ್ರೀಮತಿ ಪದ್ಮಾರವರು ನನಸಾಗಿಸಲು ತಮ್ಮ ಖಾತೆಗೆ ಸಾಂತ್ವನದ ಸೈರಣೆಯೊಂದಿಗೆ ಮುಂದಿನ ಜೀವನಕ್ಕೆ ಆಸರೆಯಾಗಲೆಂದು ಸಂಗ್ರಹವಾದ ಹಣವನ್ನು ತನ್ನ ಮಗನಂತೆ ಬಲಿಯಾಗಿ ದುಃಖ ತುಂಬಿದ ಮನೆಗಳಲ್ಲಿ ಕಷ್ಟದ ಜೀವನ ನಿರ್ವಹಿಸುತ್ತಿರುವ ಅನೇಕ ಕುಟುಂಬಗಳಿಗೆ ನೆರವಾಗಲೆಂದು “ಹರ್ಷ ಚಾರಿಟೇಬಲ್ ಟ್ರಸ್ಟ್” ನೊಂದಣಿಯಾಗಿದ್ದು, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ನೊಂದವರಿಗೆ ನೆರವಾಗುವ ಉದ್ದೇಶದೊಂದಿಗೆ ಶ್ರಮಿಸಲಿದೆ ಎಂದಿದ್ದಾರೆ.

1, 2015 ರಲ್ಲಿ ನಡೆದ ಪಿ.ಎಫ್.ಐ ಪ್ರಚೋದಿತ ಗಲಭೆಯಲ್ಲಿ ಮೃತನಾದ ವಿಶ್ವನಾಥ್ ಶೆಟ್ಟಿ ರವರ ಏಕ ಮಾತ್ರ ಪುತ್ರ ಯಶಸ್ ನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲು ಹರ್ಷನ ಕುಟುಂಬ
ವರ್ಗವು ತೀರ್ಮಾನಿಸಿದೆ.

2. ಕಾಸರಗೋಡಿನಲ್ಲಿ ಮೃತರಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಜ್ಯೋತಿಶ್ ಕುಟುಂಬಕ್ಕೆ 2.00 ಲಕ್ಷ ರೂ ಗಳ ಧನ ಸಹಾಯ ಮಾಡಿ ಜ್ಯೋತಿಶ್ ರವರ ಎರಡನೇ ಮಗನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲು ಹರ್ಷನ ಕುಟುಂಬ ವರ್ಗವು ತೀರ್ಮಾನಿಸಿರುವುದು.

ಹರ್ಷ ಚಾರಿಟೇಬಲ್ ಟ್ರಸ್ಟ್” ಉದ್ದೇಶಗಳು.

1, ಕಿತ್ತು ತಿನ್ನುತ್ತಿರುವ ಬಡತನದ ಮಧ್ಯದಲ್ಲಿಯು ಉತ್ತಮ ಸಾಧನೆ ಮಾಡಿ ಆರ್ಥಿಕ ಸಮಸ್ಯೆಯಿಂದ ವಿದ್ಯಾಭ್ಯಾಸ ಮುಂದುವರೆಸಲು ಕಷ್ಟಪಡುವ ಬಡ ವಿದ್ಯಾರ್ಥಿಗಳಿಗೆ
ಆಸರೆಯಾಗುವುದು.

2. ತೀವ್ರ ಆರೋಗ್ಯ, ಸಂಕಷ್ಟದಲ್ಲಿದ್ದು, ಚಿಕಿತ್ಸಾ ವೆಚ್ಚವನ್ನು ಭರಿಸಲಾಗದ ಆರ್ಥಿಕ ಅಶಕ್ತರಿಗೆ ನೆರವಾಗುವುದು.
ಸನಾತನ ಧರ್ಮದ ಶ್ರದ್ಧ ಭಕ್ತಿಯ ಅಸ್ಮಿತೆಯಾಗಿ ಸರ್ವದೇವಾಮಯವಾಗಿರುವ ಗೋವಿನ ಆರೈಕೆಯ ಗೋಶಾಲೆಗಳಿಗೆ ನೆರವಾಗುವುದು.

3. “ಹರ್ಷ ಚಾರಿಟೇಬಲ್ ಟ್ರಸ್ಟ್” ಹರ್ಷನ ಸಹೋದರಿಯರಾದ ಶ್ರೀಮತಿ ಅಶ್ವಿನಿ ಅಧ್ಯಕ್ಷರಾಗಿ ಶ್ರೀಮತಿ ರಜನಿ ಉಪಾಧ್ಯಕ್ಷರಾಗಿ, ವ್ಯವಸ್ಥಾಪಕ ಟ್ರಸ್ಟಿಯಾಗಿ ಮಾಜಿ ಜಿ.ಪಂ ಸದಸ್ಯರು, ಬಿ.ಜೆ.ಪಿ ಯುವನಾಯಕರಾದ ಶ್ರೀ ಕೆ.ಈ. ಕಾಂತೇಶ್ ರವರು, ಕಾರ್ಯದರ್ಶಿಯಾಗಿ ಶ್ರೀ ಸಚಿನ್ ರಾಯ್ಕರ್, ಜಂಟಿ ಕಾರ್ಯದರ್ಶಿಯಾಗಿ ಶ್ರೀ ಪುರುಷೋತಮ್ ಕೆ.ಕೆ, ಖಂಜಾಚಿಯಾಗಿ ಕೆ.ಕೆ ಫಣೀಶ್ ಪದಾಧಿಕಾರಿಗಳಾಗಿದ್ದು, ಇವರ ನೇತೃತ್ವದಲ್ಲಿ ನೊಂದವರ ದನಿಯಾಗಿ ಕಾರ್ಯನಿರ್ವಹಿಸಲಿದೆ.

ಇದನ್ನು ಒದಿ : https://cnewstv.in/?p=9309

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*