Breaking News

ಯುವಕನ ಮೇಲೆ ಹಲ್ಲೆ… ಆರೋಪಿಗಳ ಬಂಧನ… ಕೆಲಕಾಲ ಗೊಂದಲದ ವಾತಾವರಣ..

Cnewstv.in / 7.4.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಯುವಕನ ಮೇಲೆ ಹಲ್ಲೆ… ಆರೋಪಿಗಳ ಬಂಧನ… ಕೆಲಕಾಲ ಗೊಂದಲದ ವಾತಾವರಣ..

ಶಿವಮೊಗ್ಗ : ಇಂದು ಸಂಜೆ ನಗರದಲ್ಲಿ ಯುವಕನೊಬ್ಬನ ಮೇಲೆ ಆರು ಜನರ ಗುಂಪೊಂದು ಹಲ್ಲೆ ನಡೆಸಿದ್ದು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಎನ್ ಟಿ ರಸ್ತೆ ನ್ಯೂಮಂಡ್ಲಿಯ ಮಧು ( 22) ಎಂಬುವವರು ಹೂವಿನ ಮಾರ್ಕೇಟ್ ನಲ್ಲಿ ಕೆಲಸ ಮಾಡುತ್ತಿದ್ದು, ಇಂದು ಮದ್ಯಾಹ್ನ ನ್ಯೂಮಂಡ್ಲಿಯ 1 ನೇ ಕ್ರಾಸ್ ನ ಸಿದ್ದೇಶ್ವರ ರೈಸ್ ಮಿಲ್ ರಸ್ತೆಯಲ್ಲಿರುವ ವ್ಯಕ್ತಿಯೊಬ್ಬರಿಗೆ ಹೂವಿನ ಡೆಲವರಿ ಕೊಟ್ಟು ಬೈಕ್ ನಲ್ಲಿ ವಾಪಾಸ್ ಹೊರಟಾಗ, ಯಾರೂ 6 ಜನ ಯುವಕರು ಬೈಕ್ ನಲ್ಲಿ ಬಂದು ಅಡ್ಡಹಾಕಿ ಅವಾಚ್ಯಾವಾಗಿ ಬೈದು, ಎಡಪಕ್ಕಗೆ ಹಾಗೂ ಮೈಕೈಗೆ ಹೊಡೆದು ಹಲ್ಲೆ ಮಾಡಿದ್ದಾರೆ.

ಆಗ ಮಧು ಅಲ್ಲಿಂದ ತಪ್ಪಿಸಿಕೊಂಡು ಬೈಕ್ ನಲ್ಲಿ ಬಂದಿದ್ದಾರೆ. ನಂತರ ಅತನ‌ ಸ್ನೇಹಿತರು ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು 4 ಜನರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಇದನ್ನು ಒದಿ : https://cnewstv.in/?p=9300

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*