Cnewstv.in / 7.4.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
1 ಬೈಕ್ ಕಳ್ಳತನ ಪ್ರಕರಣ ಪತ್ತೆಹಚ್ಚಲು ಹೋದ ಪೊಲೀಸರಿಗೆ ಸಿಕ್ಕಿದ್ದು, ಬರೋಬ್ಬರಿ 22 ಬೈಕ್…
ಸಾಗರ : ಪಟ್ಟಣದ ನೆಹರೂ ನಗರದ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಒಂದನ್ನು ಯಾರೋ ಕಳ್ಳತನ ಮಾಡಿದರು. ಇದಕ್ಕೆ ಸಂಬಂಧಿಸಿದಂತೆ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಈ ಪ್ರಕರಣ ಸೇರಿದಂತೆ ಸಾಗರ ಟೌನ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಲ್ಲಿ ಕಳುವಾದ ದ್ವಿ ಚಕ್ರ ವಾಹನ ಮತ್ತು ಆರೋಪಿಗಳ ಪತ್ತೆಗಾಗಿ ಸಿಪಿಐ ಕಾರ್ಗಲ್ ವೃತ್ತ ಮತ್ತು ಪಿಎಸ್ಐ ಸಾಗರ ಟೌನ್, ಪಿಎಸ್ಐ ಕಾರ್ಗಲ್ ಹಾಗೂ ಸಿಬ್ಬಂಧಿಗಳನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿ, 01-04-2022 ರಂದು ಮೂವರನ್ನು ಬಂಧಿಸಲಾಯಿತು.
ಬಂಧಿತರನ್ನು ಸುಧೀಪ, ನಾಂಗೇಂದ್ರನಮಟ್ಟಿ, ಅಜಯ್, ನಾಂಗೇಂದ್ರನಮಟ್ಟಿ, ಗಂಗಾಧರ್, ಇವರನ್ನು ವಿಚಾರಣೆ ಮಾಡಿದಾಗ ಆರೋಪಿತರು ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ, ತೀರ್ಥಹಳ್ಳಿ, ಆನವಟ್ಟಿ, ಸೊರಬ, ಶಿರಾಳಕೊಪ್ಪ ಠಾಣಾ ವ್ಯಾಪ್ತಿಗಳಲ್ಲಿ ಮತ್ತು ಹಾವೇರಿ ಜಿಲ್ಲೆ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಬೈಕ್ ಗಳನ್ನು ಕಳ್ಳತನ ಮಾಡಿದ್ದಾಗಿ ಹೇಳಿಕೆ ನೀಡಿದ್ದರು.
ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರ್ ಪಡಿಸಿ ಪುನಾಃ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು, ಕಳ್ಳತನ ಮಾಡಿದ ಬೈಕ್ ಗಳನ್ನು ಸ್ವೀಕರಿಸಿದ ಆರೋಪಿ ಗುರುರಾಜ್ ನನ್ನು ಸಹಾ ಬಂಧಿಸಿ, ಆರೋಪಿತರಿಂದ 8 ಬುಲೆಟ್ ಬೈಕ್, 1 ಕೆಟಿಎಂ ಬೈಕ್, 1 ಡ್ಯೂಕ್, 1 ಬಜಾಜ್ ಪಲ್ಸರ್, 9 ಸ್ಪ್ಲೆಂಡರ್ ಪ್ಲಸ್, 1 ಯಮಹಾ ಮತ್ತು 1 ಸ್ಪ್ಲೆಂಡರ್ ಪ್ರೋ ಬೈಕ್ ಸೇರಿದಂತೆ ಅಂದಾಜು ಮೌಲ್ಯ 30,50,000/- ರೂಗಳ ಒಟ್ಟು 22 ಬೈಕ್ ಗಳನ್ನು ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದನ್ನು ಒದಿ : https://cnewstv.in/?p=9289
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments