Breaking News

22 ಯೂಟ್ಯೂಬ್, 3 ಟ್ವಿಟರ್ ಖಾತೆ, ಒಂದು ಫೇಸ್ಬುಕ್, ನ್ಯೂಸ್ ವೆಬ್ ಸೈಟ್ ಬ್ಲಾಕ್ ಮಾಡುವಂತೆ ಕೇಂದ್ರ ಸರ್ಕಾರ ಆದೇಶ.

Cnewstv.in / 6.4.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

22 ಯೂಟ್ಯೂಬ್, 3 ಟ್ವಿಟರ್ ಖಾತೆ, ಒಂದು ಫೇಸ್ಬುಕ್, ನ್ಯೂಸ್ ವೆಬ್ ಸೈಟ್ ಬ್ಲಾಕ್ ಮಾಡುವಂತೆ ಕೇಂದ್ರ ಸರ್ಕಾರ ಆದೇಶ.

ನವದೆಹಲಿ : ದೇಶದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ತಪ್ಪು ಮಾಹಿತಿಯನ್ನು ಹರಡುವುದಕ್ಕಾಗಿ 22 ಯೂಟ್ಯೂಬ್ ಆಧಾರಿತ ಸುದ್ದಿ ಚಾನೆಲ್‌ಗಳನ್ನು ನಿರ್ಬಂಧಿಸಲು ಮಾಹಿತಿ ಮತ್ತು ಪ್ರಸಾರ (ಐ & ಬಿ) ಸಚಿವಾಲಯ ಮಂಗಳವಾರ ಆದೇಶಿಸಿದೆ

2021ರ ಜಾರಿಯಾಗಿರುವ ಐಟಿ ನಿಯಮಾವಳಿಗಳ ಪ್ರಕಾರ ಭಾರತೀಯ ಯೂಟ್ಯೂಬ್ ಆಧಾರಿತ ನ್ಯೂಸ್ ಪಬ್ಲಿಷರ್ ಗಳ ವಿರುದ್ಧ ಕೇಂದ್ರ ಸರ್ಕಾರ ಕ್ರಮವನ್ನು ತೆಗೆದುಕೊಂಡಿದ್ದು, ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದ 22 ಯೂಟ್ಯೂಬ್, 3 ಟ್ವಿಟರ್ ಖಾತೆ, ಒಂದು ಫೇಸ್ಬುಕ್, ನ್ಯೂಸ್ ವೆಬ್ ಸೈಟ್ ಬ್ಲಾಕ್ ಮಾಡುವಂತೆ ಕೇಂದ್ರ ಸರ್ಕಾರ ಆದೇಶ ನೀಡಿದೆ.

4 ಪಾಕಿಸ್ತಾನದ ಚಾನೆಲ್‌ಗಳು ಹಾಗೂ ಭಾರತದ 18 ಯೂಟ್ಯೂಬ್ ಆಧಾರಿತ ಸುದ್ದಿವಾಹಿನಿಗಳನ್ನು ಬ್ಲಾಕ್ ಮಾಡಲು ಆದೇಶ ನೀಡಲಾಗಿದೆ. 2021ರ ಡಿಸೆಂಬರ್ ನಿಂದ ಇಲ್ಲಿಯವರೆಗೆ ಒಟ್ಟು 78 ಯೂಟ್ಯೂಬ್ ಆಧಾರಿತ ಸುದ್ದಿ ವಾಹಿನಿಗಳನ್ನು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬ್ಲಾಕ್ ಮಾಡುವಂತೆ ಆದೇಶ ನೀಡಲಾಗಿದೆ.

ಬ್ಲಾಕ್ ಮಾಡಲಾಗಿರುವ ಯುಟ್ಯೂಬ್ ಚಾನೆಲ್ ಗಳಲ್ಲಿ ಸರಾಸರಿ 250 ಕೋಟಿಗೂ ಹೆಚ್ಚು ವೀಕ್ಷಕರನ್ನು ಹೊಂದಿದೆ ಇದು ಭಾರತದ ಭದ್ರತಾ ವಿಚಾರಗಳು ಹಾಗೂ ವಿದೇಶಾಂಗ ನೀತಿಯ ಟೀಕಿಸುವ ಸುದ್ದಿಗಳು ಇದರಲ್ಲಿ ಪ್ರಸಾರ ಮಾಡಲಾಗಿತ್ತು

ಇದನ್ನು ಒದಿ : https://cnewstv.in/?p=9276

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*