Cnewstv.in / 5.4.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
13 ನೇ ಬಾರಿ ಪೆಟ್ರೋಲ್ – ಡೀಸೆಲ್ ದರ ಏರಿಕೆ..
ಬೆಂಗಳೂರು : ತೈಲ ಬೆಲೆ ಏರಿಕೆಯಿಂದಾಗಿ ನಿರಂತರವಾಗಿ ಪೆಟ್ರೋಲ್-ಡೀಸೆಲ್ ದರ ಏರುತ್ತಲೇ ಇದೆ.
ಮಾರ್ಚ್ 22ರಿಂದ ಇಲ್ಲಿಯವರೆಗೆ 13 ನೇ ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿದೆ.
ಇಂದು ಕೂಡ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ 80 ಪೈಸೆ ಹೆಚ್ಚಳವಾಗಿದೆ. ಕಳೆದ ಎರಡು ವಾರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ 9 ರೂಪಾಯಿ 60 ಪೈಸೆ ಏರಿಕೆಯಾಗಿದೆ.
ಪೆಟ್ರೋಲ್ ದರ..
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಒಂದು ಲೀಟರಿಗೆ 104.61 ರೂಪಾಯಿ. ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ದರ 119.17 ರೂಪಾಯಿ. ಚೆನ್ನೈ 110.11 ರೂಪಾಯಿ. ಕೊಲ್ಕತ್ತಾ 118.19 ರೂಪಾಯಿ. ಬೆಂಗಳೂರು 110.23 ರೂಪಾಯಿ. ಶಿವಮೊಗ್ಗ 110.86 ರೂಪಾಯಿ.
ಡೀಸೆಲ್ ದರ…
ದೆಹಲಿಯಲ್ಲಿ ಡೀಸೆಲ್ ದರ ಪ್ರತಿ ಒಂದು ಲೀಟರಿಗೆ 95.87
ರೂಪಾಯಿ. ವಾಣಿಜ್ಯ ನಗರಿ ಮುಂಬೈನಲ್ಲಿ ಡಿಸೇಲ್ ದರ 103.92 ರೂಪಾಯಿ. ಚೆನ್ನೈ 110.03 ರೂಪಾಯಿ. ಕಲ್ಕತ್ತಾ 104.62 ರೂಪಾಯಿ. ಬೆಂಗಳೂರು 93.33 ರೂಪಾಯಿ. ಶಿವಮೊಗ್ಗ 94.45 ರೂಪಾಯಿ.
ಪ್ರತಿನಿತ್ಯ ಹೊಸ ದರಗಳು ಬೆಳಗ್ಗೆ 6 ಗಂಟೆಗೆ ನಿಗದಿಯಾಗುತ್ತದೆ. ಸ್ಥಳೀಯ ಮಾರಾಟ ತೆರಿಗೆ ಮತ್ತು ಸಾಗಾಣಿಕೆ ವೆಚ್ಚಕ್ಕೆ ಅನುಗುಣವಾಗಿ ರಾಜ್ಯದಿಂದ ರಾಜ್ಯಕ್ಕೆ, ಜಿಲ್ಲೆಯಿಂದ ಜಿಲ್ಲೆಗೆ ವ್ಯತ್ಯಾಸವಾಗುತ್ತದೆ.
ಇದನ್ನು ಒದಿ : https://cnewstv.in/?p=9274
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
C News TV Kannada News Online in cnewstv