Breaking News

ರಾಜ್ಯ ಕೈ ನಾಯಕರಿಗೆ ಟಾರ್ಗೆಟ್ ನೀಡಿದ ರಾಹುಲ್ ಗಾಂಧಿ.

Cnewstv.in / 1.4.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ರಾಜ್ಯ ಕೈ ನಾಯಕರಿಗೆ ಟಾರ್ಗೆಟ್ ನೀಡಿದ ರಾಹುಲ್ ಗಾಂಧಿ.

ಬೆಂಗಳೂರು : ರಾಜ್ಯದ ಕೈ ನಾಯಕರಿಗೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟಾರ್ಗೆಟ್ ನೀಡಿದ್ದಾರೆ.

ಇಂದು ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “150 ಸ್ಥಾನಗಳಲ್ಲಿ ಗೆಲ್ಲಲೇಬೇಕು”. ಕರ್ನಾಟಕ ಕಾಂಗ್ರೆಸ್ ಭದ್ರಕೋಟೆ. 150 ಸ್ಥಾನ ಕ್ಕಿಂತ ಕಡಿಮೆ ಗುರಿಯನ್ನು ಯಾವುದೇ ಕಾರಣಕ್ಕೂ ಬೇಡ. ನಾವೆಲ್ಲರೂ ಒಟ್ಟಾಗಿ ಹೋಗೋಣ ಎಂದು ಒಗ್ಗಟ್ಟಿನ ಮಂತ್ರವನ್ನ ಬೋಧಿಸಿದ್ದಾರೆ.

ಟಿಕೆಟ್ ಹಂಚಿಕೆ ವಿಚಾರದಲ್ಲಿ ಹಳೆಯ ಇತಿಹಾಸ ನೋಡುವುದು ಬೇಡ. ಈ ಕ್ಷಣ ಯಾರು ಕಾಂಗ್ರೆಸ್ ಪರವಾಗಿ ಬದ್ಧರಾಗಿದ್ದಾರೆ ಅವರಿಗೆ ಅವಕಾಶ ನೀಡೋಣ. ಬಿಜೆಪಿ ಹಣದ ಮೇಲೆ ಅಧಿಕಾರಕ್ಕೆ ಬರ್ತಿದೆ. ಅದರೆ ನೀವು ಪ್ರಸಕ್ತ ವಿಷಯಗಳನ್ನ ಜನರಿಗೆ ಮುಟ್ಟಿಸುವ ಕೆಲಸ ಮಾಡಿ ಎಂದು ಕಿವಿ ಮಾತನ್ನು ಹೇಳಿದರು.

ಇನ್ನು ಪಕ್ಷದಲ್ಲಿ ಕೆಲಸ ಮಾಡದವರನ್ನು ಮೊದಲು ಪತ್ತೆ ಹಚ್ಚಿ.‌ ಟಿಕೆಟ್ ನಿಮಗೆ ಸುಲಭವಾಗಿ ಸಿಗುವುದಿಲ್ಲ. ಪಕ್ಷಕ್ಕಾಗಿ ಯಾರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೋ ಅವರಿಗೆ ಮಾತ್ರ ಈ ಬಾರಿ ಟಿಕೆಟ್ ನೀಡಬೇಕು ಎಂದಿದ್ದಾರೆ.

ಇನ್ನು ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ಮೇಲೆ ತುಂಬಾ ನಂಬಿಕೆ ಇದೆ. ಅವರಿಬ್ಬರು ಉತ್ತಮ ನಾಯಕರು. ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲಿಸಲೇ ಬೇಕು ಎಂದು ಟಾರ್ಗೆಟ್ ನೀಡಿದ್ದಾರೆ.

ಇದನ್ನು ಒದಿ : https://cnewstv.in/?p=9236

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*