Breaking News

ನಿರಂತರವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್-ಡೀಸೆಲ್ ದರ..ಈವರೆಗೆ ಎಷ್ಟು ಏರಿಕೆಯಾಗಿದೆ??

Cnewstv.in / 31.03.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ನಿರಂತರವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್-ಡೀಸೆಲ್ ದರ..ಈವರೆಗೆ ಎಷ್ಟು ಏರಿಕೆಯಾಗಿದೆ??

ಬೆಂಗಳೂರು : ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಪೆಟ್ರೋಲ್-ಡೀಸೆಲ್ ದರ ಏರಿಕೆಯಾಗುತ್ತಿದೆ 10 ದಿನಗಳಲ್ಲಿ ಬರೋಬ್ಬರಿ 9 ಬಾರಿ ಪೆಟ್ರೋಲ್ – ಡೀಸೆಲ್ ದರ ಏರಿಕೆಯಾಗಿದೆ.

ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮವಾಗಿ ಕಚ್ಚಾತೈಲ ಬೆಲೆ ದಶಕಗಳ ಬಳಿಕ ಮೊದಲ ಬಾರಿಗೆ ಭಾರೀ ಏರಿಕೆ ಕಂಡುಬಂದಿದೆ. ಪಂಚರಾಜ್ಯ ಚುನಾವಣೆಗಳ ಬಳಿಕ ದೇಶದ ಸರ್ಕಾರಿ ತೈಲ ಕಂಪನಿಗಳು ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿದಿನ ಪರಿಷ್ಕರಣೆ ವೇಳೆ ಏರಿಕೆ ಮಾಡುತ್ತಿದೆ.

ಶಿವಮೊಗ್ಗದಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ 108.75 ರೂಪಾಯಿ ಆಗಿದ್ದು, ಇಂದು 84 ಪೈಸೆ ಏರಿಕೆಯಾಗಿದೆ. ಪ್ರತಿ ಲೀಟರ್ ಡೀಸೆಲ್ ಗೆ 92.5 ರೂಪಾಯಿಗೆ ತಲುಪಿದ್ದು, 79 ಪೈಸೆ ಏರಿಕೆಯಾಗಿದೆ.

ಪೆಟ್ರೋಲ್ ಏರಿಕೆ ದರ ಈವರೆಗೆ..

ಮಾರ್ಚ್ 23 : 103.78 ರೂಪಾಯಿ. ಮಾ 24 : 103.97
ಮಾ 26 : 105.4… ಮಾ 27 : 106.27..ಮಾ 28 : 105.58..ಮಾ 29 : 106.41.. ಮಾ 30 : 107.25..ಮಾ 31 : 108.75 ರೂಪಾಯಿ ಹೆಚ್ಚಳವಾಗಿದೆ.

ಡೀಸೆಲ್ ಏರಿಕೆ ದರ ಈವರೆಗೆ..

ಮಾರ್ಚ್ 23 : 87.87ರೂಪಾಯಿ. ಮಾ 24 : 88.04
ಮಾ 26 : 89.38..ಮಾ 27 : 90.22…ಮಾ 28 : 89.65..ಮಾ 29 : 90.34.. ಮಾ 30 : 91.12 ..ಮಾ 31 : 92.5 ರೂಪಾಯಿ ಹೆಚ್ಚಳವಾಗಿದೆ..

ಬೆಂಗಳೂರು : ಪೆಟ್ರೋಲ್ ದರ

ಮಾ. 26: 103.93 ರೂ.. ಮಾ. 27: 104.46 ರೂ… ಮಾ. 28: 104.78 ರೂ… ಮಾ. 29: 105.62 ರೂ… ಮಾ. 30: 106.46 ರೂ… ಮಾ. 31: 107.30 ರೂ…

ಡೀಸೆಲ್ ದರ…

ಮಾ. 26: 88.14 ರೂ…ಮಾ. 27: 88.67 ರೂ…ಮಾ. 28: 88.67 ರೂ..ಮಾ. 29: 89.70 ರೂ…ಮಾ. 30: 90.49 ರೂ…ಮಾ. 31: 91.27 ರೂ…

ಚೆನ್ನೈನಲ್ಲಿ ಪೆಟ್ರೋಲ್ ದರ 107.45 ರೂಪಾಯಿ, ಡೀಸೆಲ್ ದರ 97.52 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ದರ 111.35 ರೂಪಾಯಿ, ಡೀಸೆಲ್ ದರ 96.22 ರೂಪಾಯಿ ಆಗಿದೆ.

ಮುಂಬೈನಲ್ಲಿ ಇಂದು ಪೆಟ್ರೋಲ್ ಬೆಲೆ 85 ಪೈಸೆ ಹೆಚ್ಚಾಗಿ ರೂ. 115.04 ಗೆ ತಲುಪಿದರೆ, ಡೀಸೆಲ್ ಬೆಲೆ 75 ಪೈಸೆ ಹೆಚ್ಚಾಗಿದ್ದು ರೂ. 99.25. ಆಗಿದೆ. ಹೈದರಾಬಾದ್‌ನಲ್ಲಿ ಪೆಟ್ರೋಲ್ ದರ 113.61 ರೂಪಾಯಿ ಆಗಿದ್ದರೆ, ಡೀಸೆಲ್ ದರ 99.84 ರೂಪಾಯಿ ಆಗಿದೆ.

ಇದನ್ನು ಒದಿ : https://cnewstv.in/?p=9207

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*