Breaking News

25 ವರ್ಷದ ಯುವತಿಯನ್ನ ಮದುವೆಯಾದ 45 ವರ್ಷದ ಶಂಕರಣ್ಣ ಆತ್ಮಹತ್ಯೆಗೆ ಶರಣು

Cnewstv.in / 29.03.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

25 ವರ್ಷದ ಯುವತಿಯನ್ನ ಮದುವೆಯಾದ 45 ವರ್ಷದ ಶಂಕರಣ್ಣ ಆತ್ಮಹತ್ಯೆಗೆ ಶರಣು

ತುಮಕೂರು : 25 ವರ್ಷದ ಮೇಘನಾ ಎಂಬ ಯುವತಿಯ ಜೊತೆ 45 ವರ್ಷದ ಶಂಕ್ರಣ್ಣ ಮದುವೆಯಾಗಿದ್ದರು. ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿತ್ತು. ಆದರೆ ಮದುವೆಯಾದ ಐದೇ ತಿಂಗಳಲ್ಲಿ ಶಂಕ್ರಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

2021 ಅಕ್ಟೋಬರ್‌ ನಲ್ಲಿ ಕುಣಿಗಲ್ ತಾಲೂಕಿನ ಅಕ್ಕಿಮರಿಪಾಳ್ಯದಲ್ಲಿದ್ದ ಶಂಕ್ರಣ್ಣ ಹಾಗೂ ಮೇಘನಾ ಮದುವೆಯಾಗಿದ್ದರು. ನಂತರ ಊರಿನಲ್ಲಿದ್ದ ತಮ್ಮ ಜಮೀನನ್ನು ಮಾರಿ ಸಿಟಿಯಲ್ಲಿ ನೆಲೆಸೋಣ ಎಂದು ಮೇಘಾನ ಹಠ ಹಿಡಿದಿದ್ದಾಳೆ. ಇದೇ ವಿಚಾರಕ್ಕೆ ಇವರ ಮಧ್ಯೆ ಪದೇಪದೇ ಜಗಳವಾಗುತ್ತಿತ್ತು. ನೆನ್ನೆ ಕೋಪದಿಂದ ಮನೆ ಬಿಟ್ಟು ಹೋಗಿದ್ದ ಶಂಕರಣ್ಣ ತಮ್ಮ ತೋಟದ ಮರಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ.

ಮಾಹಿತಿಗಳು ಪ್ರಕಾರ ಮೇಘನಾಗೆ ಇದಕ್ಕಿಂತ ಮೊದಲೇ ಬೇರೆಯವರ ಜೊತೆ ಮದುವೆಯಾಗಿತ್ತು. ಆದರೆ ಪತಿ ಮನೆ ಬಿಟ್ಟು ಓಡಿ ಹೋಗಿದ್ದ. ಹಾಗಾಗಿ ಒಂಟಿಯಾಗಿದ್ದ ಮೇಘನಾರನ್ನು ಶಂಕರಣ್ಣ ಮದುವೆಯಾಗಿದ್ದರು ಎಂದು ಹೇಳಲಾಗಿದೆ.

ಇದನ್ನು ಒದಿ : https://cnewstv.in/?p=9190

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*