Breaking News

SSLC ಪರೀಕ್ಷೆ ಬರೆಯಲು ಹೊರಟ ವಿದ್ಯಾರ್ಥಿಗೆ ಶಾಕ್.‌ ಮನೆಹೊರಗೆ ಬದುಕಿದ್ದಾಗಲೇ ತಿಥಿ ಪೂಜೆ..

Cnewstv.in / 28.03.2022 / ವಿಜಯಪುರ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

SSLC ಪರೀಕ್ಷೆ ಬರೆಯಲು ಹೊರಟ ವಿದ್ಯಾರ್ಥಿಗೆ ಶಾಕ್.‌ ಮನೆಹೊರಗೆ ಬದುಕಿದ್ದಾಗಲೇ ತಿಥಿ ಪೂಜೆ..

ವಿಜಯಪುರ : ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ಮನೆಯಿಂದ ಹೊರಗೆ ಹೋರಟ ವಿದ್ಯಾರ್ಥಿಗೆ ಶಾಕ್ ಆಗಿತ್ತು. ಮನೆಯ ಹೊರಗೆ ವಿದ್ಯಾರ್ಥಿಯ ತಿಥಿ ಪೂಜೆ ನಡೆದಿತ್ತು.

ಹೌದು ಈ ಘಟನೆ ನಡೆದಿರುವುದು ವಿಜಯಪುರ ತಾಲೂಕಿನ ಅರಕೇರಿ ತಾಂಡಾದಲ್ಲಿ..‌ ಪರೀಕ್ಷಾ ವಿದ್ಯಾರ್ಥಿ ಸಚಿನ್ ಪರೀಕ್ಷೆಯನ್ನು ಬರೆಯಲು ಸಕಲ ಸಿದ್ಧತೆಯನ್ನು ಮಾಡಿಕೊಂಡು ಮನೆಯಿಂದ ಹೊರಗೆ ಬಂದರೆ ಅದೇ ವಿದ್ಯಾರ್ಥಿಯ ಫೋಟೋಗೆ ಹೂ ಹಾಕಿ, ಪೂಜೆ ಸಲ್ಲಿಸಿ, ಪ್ರವೇಶ-ಪತ್ರದ ನಕಲಿಯಲ್ಲ ಇರಿಸಿ, ಮಡಿಕೆ, ಅರಿಶಿನ, ಕುಂಕುಮ, ಕರ್ಪೂರ ಗಳನ್ನು ಹಾಕಿ ವಾಮಾಚಾರಿ ಮಾಡಲಾಗಿದೆ.

ಸಚಿನ್ ಪರೀಕ್ಷೆಗೆ ತೆರಳುವ ಮುನ್ನವೇ ಈ ರೀತಿ ದುಷ್ಕೃತ್ಯವನ್ನು ಮಾಡಿದ್ದು, ಸಚಿನ ಹಾಗೂ ಆತನ ಪಾಲಕರು ಆತಂಕಕ್ಕೆ ಒಳಗಾಗಿದ್ದಾರೆ. ಈ ರೀತಿ ವಿಕೃತಿ ನಡೆಸಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಪಾಲಕರು ಪೊಲೀಸರನ್ನ ವಿನಂತಿಸಿದ್ದಾರೆ.

ಇದನ್ನು ಒದಿ : https://cnewstv.in/?p=9176

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*