Cnewstv.in / 26.03.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ನಿರಂತರವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್ ಡೀಸೆಲ್ ದರ..
ಬೆಂಗಳೂರು : ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಈಗ ಭಾರತದಲ್ಲೂ ಸಹ ತೈಲ ಬೆಲೆ ಏರಿಕೆ ಆರಂಭವಾಗಿದೆ. ಪೆಟ್ರೋಲ್-ಡೀಸೆಲ್ ದರ ನಿರಂತರವಾಗಿ ಏರಿಕೆಯಾಗುತ್ತಿದೆ. ಕಳೆದ ಒಂದು ವಾರದಲ್ಲಿ ನಾಲ್ಕು ಬಾರಿ ಪೆಟ್ರೋಲ್ – ಡೀಸೆಲ್ ಬೆಲೆ ಏರಿಕೆಯಾಗಿದೆ.
ಪ್ರಸ್ತುತ ಪೆಟ್ರೋಲ್ ಒಂದು ಲೀಟರ್ ಗೆ 105.38 ರೂಪಾಯಿ ತಲುಪಿದ್ದು, ಡೀಸೆಲ್ ಒಂದು ಲೀಟರಿಗೆ 89.35 ರೂಪಾಯಿಗೆ ತಲುಪಿದೆ.
ಒಂದೇ ವಾರದಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ 3.25 ಪೈಸೆ ಹೆಚ್ಚಳವಾಗಿದ್ದು, ಡೀಸೆಲ್ ಪ್ರತಿ ಲೀಟರ್ ಗೆ 3.06 ಪೈಸೆ ಹೆಚ್ಚಳವಾಗಿದೆ.
ಒಂದು ವಾರದಲ್ಲಿ ಏರಿಕೆಯಾದ ಪೆಟ್ರೋಲ್ ಡೀಸೆಲ್ ದರ.
ಮಾರ್ಚ್ 22 : ಪೆಟ್ರೋಲ್ 84 ಪೈಸೆ. ಡೀಸೆಲ್ 72 ಪೈಸೆ.
ಮಾರ್ಚ್ 23 : ಪೆಟ್ರೋಲ್ 84 ಪೈಸೆ. ಡೀಸೆಲ್ 79 ಪೈಸೆ.
ಮಾರ್ಚ್ 25 : ಪೆಟ್ರೋಲ್ 81 ಪೈಸೆ. ಡೀಸೆಲ್ 78 ಪೈಸೆ.
ಮಾರ್ಚ್ 26 : ಪೆಟ್ರೋಲ್ 77 ಪೈಸೆ. ಡೀಸೆಲ್ 72 ಪೈಸೆ.
ಇದನ್ನು ಒದಿ : https://cnewstv.in/?p=9154
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
C News TV Kannada News Online in cnewstv