Cnewstv.in / 22.03.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಕೋಟೆ ಶ್ರೀ ಮಾರಿಕಾಂಬ ದೇವಿಗೆ ಪ್ರಥಮ ಪೂಜೆ. ಜಾತ್ರಾ ಮಹೋತ್ಸಕ್ಕೆ ಚಾಲನೆ.
ಶಿವಮೊಗ್ಗ : ಇಂದು ಕೋಟೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆತಿದೆ.
ಜಾತ್ರೆಯ ಮೊದಲ ದಿನವಾದ ಇಂದು ತಾಯಿಯ ತವರು ಮನೆ ಅಂದರೆ ಗಾಂಧಿ ಬಜಾರ್ ನಲ್ಲಿ ದೇವಿಯನ್ನು ಪ್ರತಿಷ್ಠಾಪನೆಯನ್ನು ಮಾಡಿ ಬೆಳಗಿನ ಜಾವ ಪ್ರಥಮ ಪೂಜೆ ಮಾಡಲಾಯಿತು.

ಬ್ರಹ್ಮಣ ಸಮಾಜದ ನಾಡಿನ ಕುಟುಂಬದವರು ದೇವಿಗೆ ಪ್ರಥಮ ಪೂಜೆಯನ್ನು ಸಲ್ಲಿಸಿದರು. ಇಂದು ಬೆಳಗಿನ ಜಾವ ಮಳೆ ಬರುತ್ತಿದ್ದರು ಸಹ ಲೆಕ್ಕಿಸದೆ ಭಕ್ತರು ದೇವಿಯ ದರ್ಶನವನ್ನು ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದರು..
ಪ್ರತಿಯೊಬ್ಬರಿಗೂ ಸಹ ದೇವಿಯ ದರ್ಶನ ವಾಗುವಂತೆ ಸುಸಜ್ಜಿತವಾದ ವ್ಯವಸ್ಥೆಯನ್ನು ಮಾಡಲಾಗಿದೆ. ಯಾವುದೇ ರೀತಿಯಾದಂತಹ ಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಇದನ್ನು ಒದಿ : https://cnewstv.in/?p=9122
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
C News TV Kannada News Online in cnewstv