Cnewstv.in / 21.03.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ನಮ್ಮ ಬಡಾವಣೆಗೆ ಮದ್ಯದಂಗಡಿ ಬೇಡ..
ಶಿವಮೊಗ್ಗ : ನಗರದ ಗೋಪಾಲಗೌಡ ಬಡಾವಣೆಯಲ್ಲಿ ಮದ್ಯದಂಗಡಿ ಸ್ಥಳಾಂತರಕ್ಕೆ ಅವಕಾಶ ನೀಡಿರುವುದನ್ನು ನಿರಾಕರಿಸಿ, ನಿವಾಸಿಗಳ ಸಂಘದ ವತಿಯಿಂದ ಅಬಕಾರಿ ಕಛೇರಿಯ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಈ ಹಿಂದೆಯೇ ಜಿಲ್ಲಾಧಿಕಾರಿಗಳಿಗೆ ಹಾಗೂ ಡಿಬ್ಯೂಟಿ ಕಮಿಷನರ್ ಎಕ್ಸ್ಚೇಂಜ್ ಇವರಿಗೆ ಮನವಿ ಪತ್ರವನ್ನು ನೀಡಿ ಯಾವುದೇ ಒತ್ತಡಕ್ಕೂ ಮಣಿಯದೆ ಬಡಾವಣೆಯಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದೆಂದು ಆಗ್ರಹಿಸಿ, ಮನವಿಸಲ್ಲಿಸಿ ಅಬಕಾರಿ ಉಪ ಆಯುಕ್ತ ಕಛೇರಿಯಿಂದ ಸಂಘಕ್ಕೆ ಹಿಂಬರಹ ನೀಡಿ ನೀವು ಸೂಚಿಸಿರುವ ಪ್ರದೇಶದಲ್ಲಿ ಮದ್ಯದಂಗಡಿ ತೆರೆಯಲು ಪರವಾನಗಿ ಕೋರಿ ಯಾವುದೇ ಅರ್ಜಿ ಬಂದಿಲ್ಲವೆಂದು ಈ ಕಾರಣಕ್ಕೆ ನಿಮ್ಮ ಅರ್ಜಿಯನ್ನು ವಿಲೇ ಮಾಡಲಾಗಿದೆ ಎಂದು ನಿವಾಸಿಗಳ ಸಂಘಕ್ಕೆ ತಪ್ಪು ಮಾಹಿತಿಯನ್ನು ನೀಡಲಾಗಿದೆ.
ನಂತರ ದಿನಾಂಕ ಗೋಪಾಲಗೌಡ ಮತ್ತು ಸ್ವಾಮಿ ವಿವೇಕಾನಂದ ಬಡಾವಣೆಯ ನಿವಾಸಿಗಳು ಹೇಳಿಕೊಂಡಿರುವ 110 ಜನರು ಮದ್ಯದಂಗಡಿಗೆ ಪರವಾನಗಿ ನೀಡಬಹುದೆಂದು, ಮದ್ಯದಂಗಡಿಯನ್ನು ತೆರೆಯಲು ತಮ್ಮ ಆಕ್ಷೇಪಣೆ ಇಲ್ಲವೆಂದು 110 ತಮ್ಮ ಸಹಿಯೊಡನೆ ಮನವಿಯನ್ನು ಅಬಕಾರಿ ನಿರೀಕ್ಷಕರು ವಲಯ-2 ಇವರಿಗೆ ಅರ್ಜಿ ಸಲ್ಲಿಸಿರುತ್ತಾರೆಂದು, ಅದರಂತೆ ಅಬಕಾರಿ ನಿರೀಕ್ಷಕರು ವಲಯ-2 ಇವರು ಸ್ಥಳ ಮಹಜರು ಮಾಡಿ ನಿವಾಸಿಗಳ ಅಭಿಪ್ರಾಯ ಸಂಗ್ರಹಿಸಿ ಆ ಪ್ರದೇಶವು ಆಕ್ಷೇಪಣಾ ರಹಿತ ಪ್ರದೇಶವೆಂದು ತಿಳಿದು ಅಲ್ಲಿ ಮದ್ಯದಂಗಡಿ ತೆರೆಯಲು ಪರವಾನಗಿ ನೀಡಬಹುದೆಂದು ವರದಿಯನ್ನು ಅವರ ಮೇಲಾಧಿಕಾರಿಗಳಿಗೆ ನೀಡಿರುತ್ತಾರೆ.
ಆದರೆ ಗೋಪಾಲಗೌಡ ಬಡಾವಣೆ ನಿವಾಸಿಗಳ ಸಂಘಕ್ಕೆ
ಇದು ಯಾವುದೇ ವಿಚಾರವನ್ನು ತಿಳಸದೇ ಗೌಪ್ಯವಾಗಿ ವಿಷಯವನ್ನು ಮರೆಮಾಚಿರುತ್ತಾರೆ. ಅದರ ಪ್ರತಿಯನ್ನು ಸಹ ಗೋಪಾಲಗೌಡ ಬಡಾವಣಿ ನಿವಾಸಿಗಳ ಸಂಘಕ್ಕೆ
ನೀಡಿರುತ್ತಾರೆ. ಗೋಪಾಲಗೌಡ ಬಡಾವಣಿ ಜನವಸತಿ ಪ್ರದೇಶವಾಗಿದ್ದು, ಅಲ್ಲಿ ಮದ್ಯದಂಗಡಿ ತೆರೆಯುವುದರಿಂದ ಅಕ್ರಮ ಚಟುವಟಿಕೆಗಳಿಗೆ ಆಸ್ಪದವಾಗಿ ನಿವಾಸಿಗಳಿಗೆ ಹೆಚ್ಚಿನ ತೊಂದರೆಯಾಗುತ್ತದೆ. ದಯಮಾಡಿ ಬಡಾವಣೆಯಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.
ಇದನ್ನು ಒದಿ : https://cnewstv.in/?p=9106
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments