Breaking News

ಕಸಾಯಿಖಾನೆಯಿಂದ ಗೋವುಗಳ ರಕ್ಷಣೆ ಮಾಡಿದ ಕೋಟೆ ಪೊಲೀಸ್ ಠಾಣಾ ಅಧಿಕಾರಿಗಳು..

Cnewstv.in / 17.03.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಕಸಾಯಿಖಾನೆಯಿಂದ ಗೋವುಗಳ ರಕ್ಷಣೆ ಮಾಡಿದ ಕೋಟೆ ಪೊಲೀಸ್ ಠಾಣಾ ಅಧಿಕಾರಿಗಳು..

ಶಿವಮೊಗ್ಗ : ನಗರದ ಕೋಟೆ ಪೊಲೀಸ್ ಠಾಣಾ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕಸಾಯಿಖಾನೆಯಿಂದ 39 ಗೋವುಗಳನ್ನು ರಕ್ಷಣೆ ಮಾಡಿದ್ದಾರೆ.

ಪೋಲಿಸರು ಖಚಿತ ಮಾಹಿತಿಯ ಮೇರೆಗೆ ಲಷ್ಕರ್ ಮೊಹಲ್ಲಾದ ರಫೀಕ್ ಎಂಬುವವರಿಗೆ ಸೇರಿದ ಶೆಡ್ ನಿಂದ 22 ಹಸುಗಳನ್ನು ಹಾಗೂ ವಾಸಿಂ ಖಾನ್ ಎಂಬುವರಿಂದ 17 ಹಸುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಶಬ್-ಎ-ಬರಾತ್ (Shab-e-Barat)/ಹಬ್ಬಗಾಗಿ ಹಸುಗಳನ್ನು ಬಂಧಿಸಿಟ್ಟಿದ್ದರು ಎಂದು ತಿಳಿದುಬಂದಿದೆ.

ಕೋಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಚಂದ್ರಶೇಖರ್ ನೇತೃತ್ವದ ತಂಡ ಕಾರ್ಯಾಚರಣೆಯನ್ನು ನಡೆಸಿದ್ದು, ರಕ್ಷಿಸಿದ್ದ 39 ಹಸುಗಳನ್ನು ಮಹಾವೀರ ಗೋಶಾಲೆಗೆ ಸುರಕ್ಷಿತವಾಗಿ ಕಳುಹಿಸಲಾಗಿತ್ತು.

ಇದನ್ನು ಒದಿ : https://cnewstv.in/?p=9062

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*