Cnewstv.in / 17.03.2022 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಜೇಮ್ಸ್ : ಒಂದೇ ದಿನದಲ್ಲಿ ದಾಖಲೆಯ ಪ್ರದರ್ಶನ..
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ ಜೇಮ್ಸ್. ಟೀಸರ್ ಮತ್ತು ಹಾಡುಗಳಲ್ಲಿ ಈಗಾಗಲೇ ರೆಕಾರ್ಡ್ ಬ್ರೇಕ್ ಮಾಡಿದ ಜೇಮ್ಸ್ ಸಿನಿಮಾ, ಇದೀಗ ಮೊದಲ ದಿನದ ಪ್ರದರ್ಶನದಲ್ಲೂ ಮತ್ತೊಂದು ದಾಖಲೆಯನ್ನು ಮಾಡಿದೆ.
ಅಪ್ಪುವಿನ ಕೊನೆಯ ಸಿನಿಮಾವನ್ನು ನೋಡಲು ಪ್ರೇಕ್ಷಕರು ಸಾವಿರಾರು ಸಂಖ್ಯೆಯಲ್ಲಿ ಚಿತ್ರಮಂದಿರದ ಮುಂದೆ ಜಮಾಯಿಸಿದ್ದಾರೆ. ಎಲ್ಲಾ ಶೋ ಗಳು ಬುಕ್ ಆಗಿದೆ. “ಫ್ಯಾನ್ಸ್ ಶೋ” ಗಳು ಸಾಮಾನ್ಯವಾಗಿ 10 ರಿಂದ 15 ಇರುತ್ತದೆ. ಆದರೆ ಅಪ್ಪುವಿನ ಜೇಮ್ಸ್ ಚಿತ್ರ ಬೆಂಗಳೂರಿನಲ್ಲಿ ಸುಮಾರು 130 ಕ್ಕೂ ಹೆಚ್ಚು “ಫ್ಯಾನ್ಸ್ ಶೋ” ಪ್ರದರ್ಶನವಾಗಿ ಹೊಸ ದಾಖಲೆಯನ್ನು ಬರೆದಿದೆ.
400ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಜೇಮ್ಸ್ ಚಿತ್ರ ತೆರೆಕಂಡಿದೆ. ಬೆಂಗಳೂರಿನಲ್ಲಿ ಒಂದೇ ದಿನ ಬರೋಬ್ಬರಿ 920 ಕ್ಕೂ ಹೆಚ್ಚು ಶೋ ಪ್ರದರ್ಶನವಾಗಲಿದೆ. ಈಗಾಗಲೇ ಎಲ್ಲಾ ಶೋಗಳು ಬುಕ್ ಆಗಿದೆ. ಪ್ರೇಕ್ಷಕರು ಟಿಕೆಟಿಗಾಗಿ ಕಾಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಜೇಮ್ಸ್ ಚಿತ್ರದ್ದೇ ಸದ್ದು. ಜೇಮ್ಸ್ ಚಿತ್ರ ರಿಲೀಸ್ ಹಿನ್ನೆಲೆಯಲ್ಲಿ ಅಭಿಮಾನಿಗಳು ರಾತ್ರಿಯಿಂದಲೇ ಅಪ್ಪುವಿನ ದೊಡ್ಡ ದೊಡ್ಡ ಕಟೌಟ್ ನಿರ್ಮಿಸಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಇದನ್ನು ಒದಿ : https://cnewstv.in/?p=9051
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.