Cnewstv.in / 16.03.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಕೋಟೆ ಶ್ರೀ ಮಾರಿಕಾಂಬ ಜಾತ್ರೆ : 5 ದಿನಗಳ ವಿವರ.
ಶಿವಮೊಗ್ಗ : ಪ್ರತಿ 2 ವರ್ಷಗಳಿಗೊಮ್ಮೆ ನಡೆಯುವ ಕೋಟೆ ಶ್ರೀ ಮಾರಿಕಾಂಬ ಜಾತ್ರಾ ಮಹೋತ್ಸಕ್ಕೆ ಸಕಲ ಸಿದ್ಧತೆಗಳು ಅಗಿದೆ. ಕೋವಿಡ್ ಹಿನ್ನಲೆಯಲ್ಲಿ ಫೆಬ್ರವರಿ ತಿಂಗಳಿನಲ್ಲಿ ನಡೆಯಬೇಕಿದ್ದ ಜಾತ್ರೆ ಇದೇ ತಿಂಗಳು 22 ರಿಂದ 5 ದಿನಗಳು ನಡೆಯಲಿದೆ.
ಇದೇ 22 ರಂದು ಮಂಗಳವಾರ ಜಾತ್ರೆ ಪ್ರಾಂಭವಾಗುವುದೇ ಬೆಳಗಿನ ಜಾವ 5 ಗಂಟೆಗೆ ಬ್ರಾಹ್ಮಣ ನಾಡಿಗ ಕುಟುಂಬದ ಮನೆಗೆ ಹೋಗಿ ವೀಳ್ಯಕೊಟ್ಟು ವಾದ್ಯದಲ್ಲಿ ಕರೆತಂದು ಪೂಜಿಸುವ ಪದ್ಧತಿ ಇದೆ. ಬರುವಾಗ ಕುಂಬಾರ ಜನಾಂಗದವರಿಂದ ಬಾಸಿಂಗದ ಜೊತ ಅವರನ್ನೂ ಕರೆತರುತ್ತಾರೆ. ಬ್ರಾಹ್ಮಣ ಸುವಾಸಿನಿಯರು ದೇವಿಗೆ ಉಡಿತುಂಬಿ ಪೂಜಿಸಿದ ಮೇಲೆ ವಿದ್ಯುಕ್ತವಾಗಿ ಜಾತ್ರೆ ಪ್ರಾರಂಭವಾದಂತೆ, ನಂತರ ವಿಶ್ವಕರ್ಮ ಜನಾಂಗದವರಿಂದ ದಿನವಿಡೀ ಪೂಜೆ ನಡೆಯುತ್ತದೆ. ದೇವಿಯ ದರ್ಶನಕ್ಕೆ ಭಕ್ತರಿಗೆ ಅನುವು ಮಾಡಿಕೊಡಲಾಗುವುದು. ರಾತ್ರಿ 9ರ ಸುಮಾರಿಗೆ ಉಪ್ಪಾರ ಕುಲದವರು ದೇವಿಯನ್ನು ಗದ್ದುಗೆಗೆ ಕರೆ ತರುತ್ತಾರೆ. ಈ ಮಧ್ಯೆ ದೇವಿಯನ್ನು ಗಂಗಮತಸ್ಥ ಸಮಾಜದವರು
ಗಟೇವುನೊಂದಿಗೆ ಗಾಂಧಿಬಜಾರ್‌ನಲ್ಲಿ ದೇವಿಗೆ ಎದುರುಗೊಂಡು ಪೂಜೆ ಸಲ್ಲಿಸುತ್ತಾರೆ.
ತದ ನಂತರ ಗದ್ದುಗೆ ಬಳಿ ದೇವಿ ಬಂದಾಗ ವಿದ್ಯಾನಗರದ ಕರ್ಲಹಟ್ಟಿಯ ಹರಿಜನ ಬಾಂಧವರು ಪೂಜೆ ಸಲ್ಲಿಸುತ್ತಾರೆ.
ಗದ್ದುಗೆಯಲ್ಲಿ ದೇವಿ ಕೂರಿಸುತ್ತಿದಂತೆ ಕುರುಬ ಸಮಾಜದ ಚೌಡಿಕೆ ಮನೆತನದವರು ದೇವಿಗೆ ಪೂಜೆ ಸಲ್ಲಿಸಿ ನಿವೇಧ್ಯ
ಆರ್ಪಿಸುತ್ತಾರೆ. ಬುಧವಾರ ಬೆಳಿಗ್ಗೆ 6, 30 ರಿಂದ ವಾಲ್ಮೀಕಿ ಜನಾಂಗದವರು ನಂತರ ಉಪ್ಪಾರರು ತದನಂತರ ಮಡಿವಳರು ರಾತ್ರಿ ವರೆಗೂ 4 ದಿನಗಳ ಕಾಲ ಗದ್ದುಗೆಯಲ್ಲಿ ಅಮ್ಮನವರಿಗೆ ಪೂಜೆ ಮಾಡುತ್ತಾರೆ. ಶನಿವಾರ ರಾತ್ರಿ 8 ಗಂಟೆಗೆ ಅಮ್ಮನವರ ರಾಜಬೀದಿ ಉತ್ಸವ ಗಾಂಧಿ ಬಜಾರ್ ಬಿ.ಹೆಚ್.ರಸ್ತೆ, ಟ್ಯಾಂಕ್ ಬಾಂಡ್ ರಸ್ತೆಯಿಂದ ಹೊನ್ನಾಳಿ ರಸ್ತೆಯ ಸೇತುವೆ ಮೂಲಕ ಅರಣ್ಯದಲ್ಲಿಮೂರ್ತಿ ವಿರ್ಸಜಿಸುವ ಮೂಲಕ ಜಾತ್ರೆ ಸಂಪನ್ನಗೊಳ್ಳುವುದು.
ಕೋಟೆ ಶ್ರೀ ಮಾರಿಕಾಂಬ ಜಾತ್ರೆಯ ವಿವರ :
ದಿನಾಂಕ 22-03-2022 ಮಂಗಳವಾರ ಗಾಂಧಿ ಬಜಾರ್‌ನಲ್ಲಿ ಬೆಳಿಗ್ಗೆ 7 ಗಂಟೆಗೆ ಕ್ಕೆ ಶ್ರೀ ಅಮ್ಮನವರಿಗೆ ಪೂಜೆ ಆರಂಭ. ರಾತ್ರಿ 9 ಕ್ಕೆ ಗಾಂಧಿಬಜಾರ್‌ನಿಂದ ಉತ್ಸವದೊಂದಿಗೆ ಗದ್ದಿಗೆ ಪ್ರವೇಶ.
ಶ್ರೀದೇವಿಯ ದೇವಸ್ಥಾನದಲ್ಲಿ 22 ರಂದು ಮಂಗಳವಾರದಿಂದ 26 ಶನಿವಾರದವರೆಗೆ ಪ್ರತಿದಿನ ಬೆಳಿಗ್ಗೆ 7.00 ರಿಂದ ಹರಕೆ, ಪೂಜೆ,ಪ್ರಸಾದ ವಿನಿಯೋಗವಿರುತ್ತದೆ.
ಮಾರ್ಚ್ 25 ರಂದು ರಾತ್ರಿ 8.00ಕ್ಕೆ ಮಹಾಮಂಗಳಾರತಿ.
ಮಾರ್ಚ್ 26 ರಂದು ರಾತ್ರಿ 8.00ಕ್ಕೆ ಶ್ರೀ ಅಮ್ಮನವರ ರಾಜಬೀದಿ ಉತ್ಸವದೊಂದಿಗೆ ವನಪ್ರವೇಶ.
ಮಾರ್ಚ್ 29 ರಂದು ಮಂಗಳವಾರ ಶ್ರೀ ಅಮ್ಮನವರಿಗೆ ಬೆಳಿಗ್ಗೆ 9.00 ರಿಂದ ಕುಂಭಾಭಿಷೇಕವಿರುತ್ತದೆ.
ಮಾರ್ಚ್ 24 ಮತ್ತು 25ರಂದು ಸಂಜೆ 7.00 ರಿಂದ
ಸಾಂಸ್ಕತಿಕ ಕಾರ್ಯಕ್ರಮ ನಡು ನುಡಿ ಸರಸರು.
ಇದನ್ನು ಒದಿ : https://cnewstv.in/?p=9039
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments