Cnewstv.in / 15.03.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
“ದಿ ಕಾಶ್ಮೀರ್ ಫೈಲ್ಸ್” ಇನ್ನೆರಡು ದಿನ ಉಚಿತ ಚಿತ್ರ ಪ್ರದರ್ಶನ..
ಶಿವಮೊಗ್ಗ : ಇಂದು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್ ಈಶ್ವರಪ್ಪನವರು ಉಚಿತ ಚಿತ್ರ ಪ್ರದರ್ಶನ ಆಯೋಜಿಸಿದ್ದರು.
ವೀರಭದ್ರೇಶ್ವರ ಚಿತ್ರಮಂದಿರ ಭರ್ತಿಯಾಗಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ಸಾಕಷ್ಟು ಮಂದಿ ಸಿನಿಮಾವನ್ನು ನೋಡಲು ಆಸೆಯಿಂದ ಬಂದಿದ್ದರೂ ಅದರ ಚಿತ್ರಮಂದಿರ ಬರ್ತೀಯಾದ ಕಾರಣ ಹಿಂತಿರುಗಿದ್ದಾರೆ. ಹಾಗಾಗಿ ಮತ್ತೆರಡು ದಿನ ಉಚಿತ ಚಿತ್ರ ಪ್ರದರ್ಶನವನ್ನು ಆಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ ಈ ಕಾಂತೇಶ್ ತಿಳಿಸಿದ್ದಾರೆ.
ಮಾರ್ಚ್ 17 ಮತ್ತು 18ರಂದು ಸಂಜೆ 5.30 ಕ್ಕೆ ಉಚಿತ ಚಿತ್ರ ಪ್ರದರ್ಶನವನ್ನು ವೀರಭದ್ರಶ್ವರ ಚಿತ್ರಮಂದಿರದಲ್ಲಿ ಆಯೋಜನೆ ಮಾಡಲಾಗಿದ್ದು, ಆಸಕ್ತರು ಸಿನಿಮಾವನ್ನು ವೀಕ್ಷಿಸಬಹುದು. ಉಚಿತ ಪಾಸ್ ಗಾಗಿ ಶಾಸಕರ ಕಚೇರಿ ಅಥವಾ ಬಿಜೆಪಿ ಕಚೇರಿಯಲ್ಲಿ ಪಡೆದುಕೊಳ್ಳಬೇಕಾಗಿ ತಿಳಿಸಿದ್ದಾರೆ.
ಇದನ್ನು ಒದಿ : https://cnewstv.in/?p=9032
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments