Breaking News

ಕೋರ್ಟ್ ಆದೇಶವನ್ನು ಸಂತೋಷದಿಂದ ಸ್ವೀಕರಿಸುತ್ತೇವೆ‌ – ಸಚಿವ ಕೆ.ಎಸ್.‌ ಈಶ್ವರಪ್ಪ.‌

Cnewstv.in / 15.03.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಕೋರ್ಟ್ ಆದೇಶವನ್ನು ಸಂತೋಷದಿಂದ ಸ್ವೀಕರಿಸುತ್ತೇವೆ‌ – ಸಚಿವ ಕೆ.ಎಸ್.‌ ಈಶ್ವರಪ್ಪ.‌

ಶಿವಮೊಗ್ಗ : ಹಿಸಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ಸಂತೋಷದಿಂದ ಸ್ವಾಗತಿಸುತ್ತೇನೆ ಎಂದು ಪಂಚಾಯತ್ ರಾಜ್ ಸಚಿವ ಕೆ.ಎಸ್.‌ ಈಶ್ವರಪ್ಪ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಸೇರಿದಂತೆ ಇಡೀ ದೇಶದಲ್ಲಿ ಇದ್ದಂತಹ ಗೊಂದಲ ನಿವಾರಣೆ ಯಾಗುವ ನಿಟ್ಟಿನಲ್ಲಿ ಯಾರು ಇದಕ್ಕೆ ಪ್ರಚೋದನೆಯನ್ನು ನೀಡಿದ್ದರೂ ಅವರು ಇದನ್ನು ಗಮನಿಸಿ ತಕ್ಷಣ ಎಲ್ಲಾ ವಿದ್ಯಾರ್ಥಿನಿಯರು ಶಾಲೆಗೆ ಹೋಗುವ ನಿಟ್ಟಿನಲ್ಲಿ ಬುದ್ಧಿವಾದವನ್ನು ಹೇಳಬೇಕು.

ಈಗಾಗಲೇ ಮಕ್ಕಳ ಶಿಕ್ಷಣವನ್ನು ಸಾಕಷ್ಟು ಹಾಡು ಮಾಡಿದ್ದಾಗಿದೆ. ಯಾವುದೇ ಕಾರಣಕ್ಕೂ ಮಕ್ಕಳ ಶಿಕ್ಷಣ ಹಾಳಾಗ ಬಾರದು. ಹೈಕೋರ್ಟ್ ತೀರ್ಮಾನಕ್ಕೆ ಬದ್ಧ ರಾಗಿರುವುದು, ಕರ್ತವ್ಯ ಪ್ರಜಾಪ್ರಭುತ್ವ ವ್ಯವಸ್ಥೆ. ಹಾಗಾಗಿ ಎಲ್ಲರೂ ಕೋರ್ಟ್ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು. ಎಲ್ಲರೂ ಶಿಕ್ಷಣಕ್ಕೆ ಹೋಗಬೇಕು ಎಂದರು.

ಇದನ್ನು ಒದಿ : https://cnewstv.in/?p=9022

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*