Breaking News

ನಾವು ಕೋರ್ಟ್ ತೀರ್ಪು ಹಾಗೂ ಸಂವಿಧಾನಕ್ಕೆ ತಲೆಬಾಗಲೇಬೇಕು – ಅರಗ ಜ್ಞಾನೆಂದ್ರ

Cnewstv.in / 15.03.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ನಾವು ಕೋರ್ಟ್ ತೀರ್ಪು ಹಾಗೂ ಸಂವಿಧಾನಕ್ಕೆ ತಲೆಬಾಗಲೇಬೇಕು – ಅರಗ ಜ್ಞಾನೆಂದ್ರ

ಬೆಂಗಳೂರು : ರಾಷ್ಟ್ರಾದ್ಯಂತ ಚರ್ಚೆಗೆ ಗ್ರಾಸವಾದ ಹಿಜಾಬ್ ವಿಚಾರಕ್ಕೆ ಸಂಬಂಧಪಟ್ಟಂತೆ ತೀರ್ಪು ಇನ್ನು ಕೆಲವೇ ಸಮಯದಲ್ಲಿ ಪ್ರಕಟವಾಗಲಿದೆ. ಹಿಜಾಬ್ ವಿಚಾರದಲ್ಲಿ ಏನೇ ತೀರ್ಪು ಬಂದರೂ ನಾವು ಕೋರ್ಟಿನ ತೀರ್ಪಿಗೆ ಹಾಗೂ ಸಂವಿಧಾನಕ್ಕೆ ತಲೆಬಾಗಲೇಬೇಕು ಎಂದು ಗೃಹಸಚಿವರ ಜ್ಞಾನೇಂದ್ರ ಹೇಳಿದ್ದಾರೆ.

ಈಗಾಗಲೇ ರಾಜ್ಯಾದ್ಯಂತ ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಜಿಲ್ಲೆಗಳಲ್ಲಿ ಸೆಕ್ಷನ್ ಜಾರಿಗೆ ತರಲಾಗಿದೆ. KSRP ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ಎಸ್ ಪಿ ಸೇರಿದಂತೆ ಎಲ್ಲ ಹಿರಿಯ ಅಧಿಕಾರಿಗಳು ಸ್ಥಳದಲ್ಲಿಯೇ ಇರಬೇಕೆಂದು ಸೂಚನೆಯನ್ನು ನೀಡಲಾಗಿದೆ ಎಂದರು.

ಇದನ್ನು ಒದಿ : https://cnewstv.in/?p=9018

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*