Breaking News

ಉದ್ಯೋಗಿಗಳ ಭವಿಷ್ಯಕ್ಕಾಗಿ ಭವಿಷ್ಯ ನಿಧಿ : ಯಾದವ್

Cnewstv.in / 13.03.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಉದ್ಯೋಗಿಗಳ ಭವಿಷ್ಯಕ್ಕಾಗಿ ಭವಿಷ್ಯ ನಿಧಿ : ಯಾದವ್

ಶಿವಮೊಗ್ಗ : ಉದ್ಯೋಗಿಗಳ ಭವಿಷ್ಯಕ್ಕಾಗಿ ಭವಿಷ್ಯ ನಿಧಿ ಅತ್ಯಂತ ಸಹಕಾರಿ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಮಂತ್ರಿ ಭೂಪೇಂದ್ರ ಯಾದವ್ ಹೇಳಿದರು.

ನಗರದ ವಾಜಪೇಯಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪ್ರಾದೇಶಿಕ ಪಿಎಫ್ (ಭವಿಷ್ಯನಿಧಿ) ಕಚೇರಿಯ ಉದ್ಘಾಟನೆಯನ್ನು ವರ್ಚುಯಲ್ ಮೂಲಕ ಗೋವಾಹಟಿಯಿಂದ ನೆರವೇರಿಸಿ ಮಾತನಾಡಿದರು.
ಕಾರ್ಮಿಕರ ಹಾಗೂ ಉದ್ಯೋಗಿಗಳ ಹಿತದೃಷ್ಟಿಯಿಂದ ಭವಿಷ್ಯ ನಿಧಿಯನ್ನು ಸ್ಥಾಪಿಸಲಾಗಿದ್ದು, ಪ್ರತಿಯೊಂದು ಖಾಸಗಿ ಸಂಸ್ಥೆಗಳು ಕೂಡ ತಮ್ಮ ಸಂಸ್ಥೆಯಲ್ಲಿನ ನೌಕರರ ಮುಂದಿನ ಭವಿಷ್ಯಕ್ಕಾಗಿ ಭವಿಷ್ಯ ನಿಧಿಗೆ ಸೇರ್ಪಡೆಗೊಳಿಸಬೇಕೆಂದು ಹೇಳಿದರು.

ಶಿವಮೊಗ್ಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪಿಎಫ್‌ನ ಪ್ರಾದೇಶಿಕ ಆಯುಕ್ತ ಎ.ಪಿ.ಉನ್ನಿ ಕೃಷ್ಣನ್ ಮಾತನಾಡಿ, ಶಿವಮೊಗ್ಗ ನಗರದಲ್ಲಿ ೧೧೫೨ ಚ.ವಿಸ್ತೀರ್ಣದಲ್ಲಿ ನೆಲ ಮತ್ತು ೨ಅಂತಸ್ತುಗಳ ಕಟ್ಟಡ ನಿರ್ಮಾಗೊಂಡಿದ್ದುಮ, ಎಲ್ಲಾ ಸುರಕ್ಷತಾ ಕ್ರಮಗಳನ್ನು ಹೊಂದಿದೆ. ಅಲ್ಲದೇ ಉತ್ತಮ ಮೂಲಭೂತ ಸೌಕರ್ಯಗಳನ್ನು ಕೂಡ ನಮ್ಮ ಕಚೇರಿ ಒಳಗೊಂಡಿದೆ ಎಂದರು.

ಭವಿಷ್ಯನಿಧಿ ಸದಸ್ಯರು ಮತ್ತು ಕುಟುಂಬದವರು ಕೆವೈಸಿ ಮಾಹಿತಿಗಳಾದ ಆಧಾರ್, ಪಾನ್‌ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಇನ್ನು ಮುಂತಾದ ಯಾವುದೇ ಮಾಹಿತಿಯನ್ನು ಅಪರಿಚಿತ ವ್ಯಕ್ತಿಗಳೊಂದಿಗೆ ಹಂಚಿಕೆ ಮಾಡಿಕೊಳ್ಳಬಾರದು ಎಂದು ತಿಳಿಸಿದ ಅವರು ಪ್ರತಿಯೊಬ್ಬ ಸದಸ್ಯರು ಆಧಾರ್‌ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, ಮೊಬೈಲ್ ಸಂಖ್ಯೆಗಳನ್ನು ಭವಿಷ್ಯ ನಿಧಿ ಖಾತೆಗೆ ಸೇರ್ಪಡೆಗೊಳಿಸಬೇಕೆಂದು ಹೇಳಿದರು.

ಪ್ರತಿಯೊಂದು ವ್ಯವಹಾರವೂ ಕೂಡ ಆನ್‌ಲೈನ್ ಮೂಲಕವೇ ನಡೆಯುತ್ತಿದೆ ಎಂದ ಅವರು, ಕೋವಿಡ್ ಸಂದರ್ಭದಲ್ಲಿ ಸಂಸ್ಥೆಗಳ ಮುಚ್ಚುವಿಕೆ ಮತ್ತು ವೇತನಗಳನ್ನು ಪಾವತಿ ಮಾಡದಿರುವ ಕಾರಣ ವೈದ್ಯಕೀಯ ವೆಚ್ಚ ಪೂರೈಸುವ ಸಲುವಾಗಿ ಭವಿಷ್ಯ ನಿಧಿಯನ್ನು ಹಿಂಪಡೆಯುವ ಹೊಸ ನಿಬಂಧನೆಯನ್ನು ಪರಿಚಯಿಸಿತು ಎಂದು ಹೇಳಿದರು.

ಭವಿಷ್ಯ ನಿಧಿ ಕಚೇರಿ ವ್ಯಾಪ್ತಿಯಲ್ಲಿ ಬರುವ ಉದ್ಯೋಗದಾತರು ಮತ್ತು ಸದಸ್ಯರುಗಳ ಕುಂದು ಕೊರತೆಗಳನ್ನು ವಾಟ್ಸ್ಅಪ್ ಸಂಖ್ಯೆ ೮೧೮೨೨೭೫೧೦೩ ಮೂಲಕ ನೊಂದಾಯಿಸಬಹುದಾಗಿದೆ. ಅಲ್ಲದೇ ಕೆವೈಸಿ ಮಾಹಿತಿಯನ್ನು ಪರಿಷ್ಕರಿಸುವ ಮಾಹಿತಿಗಾಗಿಯೂ ಸಹ ಈ ಸಂಖ್ಯೆಯೊAದಿಗೆ ವ್ಯವಹರಿಸಬಹುದಾಗಿದೆ ಎಂದರು.

ಇದನ್ನು ಒದಿ : https://cnewstv.in/?p=8996

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*