Cnewstv.in / 12.03.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಬಗರ್ ಹುಕುಂ ಸಮಸ್ಯೆ ಜೀವಂತವಾಗಿರಲು ಬಿಜೆಪಿ ಸರ್ಕಾರವೇ ನೇರ ಕಾರಣ..
ಶಿವಮೊಗ್ಗ : ಬಗರ್ ಹುಕುಂ ಸಮಸ್ಯೆ ಜೀವಂತವಾಗಿರಲು ಬಿಜೆಪಿ ಸರ್ಕಾರವೇ ನೇರ ಕಾರಣ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಸಂಸದ ಬಿ.ವೈ.ರಾಘವೇಂದ್ರ ವಿರುದ್ದ ವಾಗ್ದಾಳಿ ನಡೆಸಿದರು.
ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆಗಳ ಬಗ್ಗೆ ಜಿಲ್ಲೆಯ ಸಂಸದರಿಗೆ ಏನೇನು ಗೊತ್ತಿಲ್ಲ, ಇದು 2006 ರ ಸಮಸ್ಯೆ ಅಲ್ಲ, ಇದು 2012 ರ ಸಮಸ್ಯೆ. 2002ರಲ್ಲಿ ಅಂದಿನ ಸಂಸದರಾಗಿದ್ದ ಬಂಗಾರಪ್ಪನವರು 45 ನಿಮಿಷಗಳ ಕಾಲ ಸಂಸತ್ತಿನಲ್ಲಿ ಇದೇ ವಿಚಾರದ ಬಗ್ಗೆ ಮಾತನಾಡಿದರು. ಅದರೆ ಸಂಸದರು ಸಂಸತ್ತಿನಲ್ಲಿ ಈ ಸಮಸ್ಯೆಯ ಬಗ್ಗೆ ಒಂದು ಸಲವೂ ಸಹ ಮಾತನಾಡಲಿಲ್ಲ ಎಂದರು.
ಹೊಟ್ಟೆಪಾಡಿಗೆ ಸಾಗುವಳಿ ಮಾಡುತ್ತಿರುವವರಿಗೆ ಭೂಕಬಳಿಕೆದಾರರು ಎಂದು ಕೇಸು ಹಾಕಿದ್ದಾರೆ. ಈಗಾಗಲೇ ಸಾವಿರಾರು ಜನರಿಗೆ ಮೇಲೆ ಕೇಸ್ ಹಾಕುತ್ತಿದ್ದರು ಸಹ ಕಣ್ಮುಚ್ಚಿ ಕುಳಿತಿದ್ದಾರೆ. ಸೊರಬ ತಾಲೂಕಿನಲ್ಲಿಯೇ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಬಗರ್ ಹುಕುಂ ಸಾಗುವಳಿದಾರರಿಗೆ ನೋಟಿಸ್ ನೀಡಿದ್ದಾರೆ. ಈಗಲಾದರೂ ಕೇಂದ್ರದ ಮೇಲೆ ಒತ್ತಡ ತಂದು ಬಗರುಕುಂ ಸಾಗುವಳಿದಾರರ ರಕ್ಷಣೆಗೆ ನಿಲ್ಲಬೇಕು ಎಂದರು.
ಇದನ್ನು ಒದಿ : https://cnewstv.in/?p=8982
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
C News TV Kannada News Online in cnewstv