Breaking News

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಿ.ಎಸ್.ವೈ‌ ಹೆಸರು ಅಂತಿಮಗೊಳಿಸಿ, ಜಿಲ್ಲೆಯ ಜನಪ್ರತಿನಿಧಿಗಳಿಂದ ಸಿಎಂಗೆ ಮನವಿ.

Cnewstv.in / 11.03.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಿ.ಎಸ್.ವೈ‌ ಹೆಸರು ಅಂತಿಮಗೊಳಿಸಿ, ಜಿಲ್ಲೆಯ ಜನಪ್ರತಿನಿಧಿಗಳಿಂದ ಸಿಎಂಗೆ ಮನವಿ.

ಶಿವಮೊಗ್ಗ : ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ‌ ಯಡಿಯೂರಪ್ಪನವರ ಹೆಸರನ್ನು ಇಡಬೇಕು ಎಂದು ಶಿವಮೊಗ್ಗ ಜಿಲ್ಲೆಯ ಜನಪ್ರತಿನಿಧಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.

ಮಾಜಿ ಮುಖ್ಯಮಂತ್ರಿಗಳು ಮತ್ತು ನಮ್ಮೆಲ್ಲರ ನಾಯಕರೂ ಆದ ಬಿ.ಎಸ್.ಯಡಿಯೂರಪ್ಪನವರು ಶಿವಮೊಗ್ಗದೊಂದಿಗೆ ವಿಶೇಷವಾದ ಅವಿನಾಭಾವ ಸಂಬಂಧವನ್ನು ಹೊಂದಿದ್ದಾರೆ. 1983ರಲ್ಲಿ ಮೊದಲ ಬಾರಿಗೆ ಶಾಸಕರಾಗಿ‌ ಆಯ್ಕೆಯಾದನಿಂದಲೂ ಶಿವಮೊಗ್ಗಾ ಜಿಲ್ಲೆಯ ಮತ್ತು ನಗರದ ಅಭಿವೃದ್ಧಿಗೆ ಅವರ ಕೊಡುಗೆ ಅನನ್ಯ ಮತ್ತು ಅಪಾರವಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಮುಖ್ಯಮಂತ್ರಿಯಾಗಿ ಇವರು ಕೈಗೊಂಡಿರುವ ಹಲವಾರು ಯೋಜನೆಗಳಿಂದ ಇಂದು ಶಿವಮೊಗ್ಗ ನಗರವು ಸೌಕರ್ಯಭರಿತ ನಗರವಾಗಿದೆ. ಅದರ ಜೊತೆ ಸ್ಮಾರ್ಟ್ ಸಿಟಿಯಾಗಿಯೂ ಬದಲಾಗಿದೆ.

ಬಿಎಸ್.ಯಡಿಯೂರಪ್ಪನವರು 2009 ರಲ್ಲಿ ಮೊದಲನೆ ಬಾರಿ ಮುಖ್ಯಮಂತ್ರಿಯಾದ ಮೇಲೆ ಶಿವಮೊಗ್ಗ ನಗರಕ್ಕೆ ವಿಮಾನ ಸೇವೆ ಒದಗಿಸಲು ವಿಮಾನ ನಿಲ್ದಾಣ ನಿರ್ಮಿಸುವ ಯೋಜನೆಗೆ ಚಾಲನೆ ನೀಡಿದರು.

2020 ರಲ್ಲಿ ಮತ್ತೆ ಮುಖ್ಯಮಂತ್ರಿಯಾದ ತರುವಾಯ ವಿಮಾನ ನಿಲ್ದಾಣ ಕಾಮಗಾರಿಗೆ ವೇಗ ನೀಡಿದರು. ಇವರ ಪ್ರಯತ್ನದ ಫಲವಾಗಿ ಸೋಗಾನೆ ಗ್ರಾಮದ ಸಮೀಪ 624ಎಕರೆ ಜಾಗದಲ್ಲಿ 2384 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ವಿಮಾನ ನಿಲ್ದಾಣವು ಡಿಸೆಂಬರ್ 2022ಕ್ಕೆ ಲೋಕಾರ್ಪಣೆಗೊಳ್ಳಲು ಸಜ್ಜಾಗುತ್ತಿದೆ.

ಮೊದಲನೇ ಹಂತದಲ್ಲಿ ೦ಖಿಖ 12-600 ವಿಮಾನ ಹಾರಾಟಕ್ಕೆ ಯೋಜನೆಯು ಜಾರಿಯಾಗುತ್ತಿದೆ. ಎರಡನೆ ಹಂತದಲ್ಲಿ ಬೋಯಿಂಗ್ ವಿಮಾನ ಸೇವೆಯನ್ನು ನೀಡಲು ರನ್ ವೇ ವಿಸ್ತರಣೆಗೆ ಈಗಾಗಲೇ ಭೂ ಸ್ವಾಧೀನವನ್ನು ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಅಭಿವೃದ್ಧಿ ಮತ್ತು ಮಲೆನಾಡಿನ ಪ್ರವಾಸೋದ್ಯಮವನ್ನು ಜನಪ್ರಿಯಗೊಳಿಸುವ ದೂರದೃಷ್ಟಿಯಿಂದ ಕೈಗೊಂಡ ಈ ಯೋಜನೆಯ ಕೀರ್ತಿಯು ಬಿ.ಎಸ್.ಯಡಿಯೂರಪ್ಪನವರಿಗೆ ಸಲ್ಲುತ್ತದೆ.

ಮಾನ್ಯ ಬಿ.ಎಸ್.ಯಡಿಯೂರಪ್ಪನವರು ವಿಶೇಷವಾಗಿ ಶಿವಮೊಗ್ಗಾ ಜಿಲ್ಲೆಗೆ ನೀಡಿರುವ ಅಪಾರ ಕೊಡುಗೆ ಮತ್ತು ಸವಾ೦೯ಗೀಣ ಪ್ರಗತಿಗಾಗಿ ಪಟ್ಟಿರುವ ಶ್ರಮವನ್ನು ಪರಿಗಣಿಸಿ ನೂತನವಾಗಿ ನಿರ್ಮಾಣವಾಗುತ್ತಿರುವ ಅವರ ಕನಸಿನ ಕೂಸಾದ ವಿಮಾನ ನಿಲ್ದಾಣಕ್ಕೆ ಬಿ.ಎಸ್.ಯಡಿಯೂರಪ್ಪನವರ ಹೆಸರು ನಾಮಕರಣ ಮಾಡುವುದು ಅತ್ಯಂತ ಸೂಕ್ತ ಎಂದು ಜಿಲ್ಲೆಯ ಜನಪ್ರತಿನಿಧಿಗಳ ಮತ್ತು ವಿವಿಧ ಕ್ಷೇತ್ರಗಳಿಗೆ
ಸೇರಿದವರ ಮತ್ತು ಬಹುತೇಕ ಜನತೆಯ ಭಾವನೆಯು ಕೂಡಾ ಆಗಿದೆ.

ಈ ಹಿನ್ನಲೆಯಲ್ಲಿ ತಮ್ಮಲ್ಲಿ ನಮ್ಮ ಅರಿಕೆಯೆಂದರೆ ಜಿಲ್ಲೆಯ ಜನತೆಯ ಮತ್ತು ಚುನಾಯಿತ ಪ್ರತಿನಿಧಿಗಳ ಆಶಯಕ್ಕೆ ಸ್ಪಂದಿಸಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನಮ್ಮಲ್ಲರ ನಾಯಕರಾದ
“#ಬಿ.ಎಸ್.ಯಡಿಯೂರಪ್ಪ ವಿಮಾನ ನಿಲ್ದಾಣ” ಎಂದು ನಾಮಕರಣ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು
ಮಾಡಬೇಕು ಎಂದು ಕೋರುತ್ತೇವೆ. ಇದರಿಂದ ಶಿವಮೊಗ್ಗ ಜಿಲ್ಲೆ ವಿಮಾನ ನಿಲ್ದಾಣ ಹೊಂದುವ ಕನಸನ್ನು ಸಾಕಾರಗೊಳಿಸಿದ ಬಿ.ಎಸ್. ಯಡಿಯೂರಪ್ಪನವರಿಗೆ ಸೂಕ್ತ ಗೌರವ ಸಲ್ಲಿಸಿದಂತಾಗುವುದು.

ಇದನ್ನು ಒದಿ : https://cnewstv.in/?p=8971

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*