Breaking News

ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಬಿಜೆಪಿ ನಗರಾಡಳಿತ ನಿರ್ಲಕ್ಷ.‌

Cnewstv.in / 11.03.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಬಿಜೆಪಿ ನಗರಾಡಳಿತ ನಿರ್ಲಕ್ಷ.‌

ಶಿವಮೊಗ್ಗ : ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ನಿರ್ಲಕ್ಷತನ ತೋರಿರುವ ಬಿಜೆಪಿ ನಗರ ಆಡಳಿತದ ವಿರುದ್ಧ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ, ಪಾಲಿಕೆ ಸದಸ್ಯ H.C ಯೋಗೇಶ್, ರೇಖಾ ರಂಗನಾಥ್, ರಮೇಶ್ ಹೆಗ್ಡೆ ಖಾಲಿ ಬಿಂದಿಗೆ ಹಿಡಿದು ಪ್ರತಿಭಟನೆ ನಡೆಸಿದರು.

ನಗರದಲ್ಲಿ ಕುಡಿಯುವ ನೀರಿನ ಸರಬರಾಜು ಚಾಲನೆ ಹಾಗೂ ನಿರ್ವಹಣೆ ಕಾಮಗಾರಿಗಾಗಿ ಪ್ರತ್ಯೇಕ ವಿಭಾಗವನ್ನು ಪ್ರಾರಂಭಿಸಲು ಮಹಾನಗರ ಪಾಲಿಕೆ ನಿರ್ಣಯ ಕೈಗೊಂಡು ಅನೇಕ ತಿಂಗಳುಗಳು ಕಳೆದರೂ ಪ್ರಾರಂಭಿಸದೆ ಬಿಜೆಪಿ ನಗರಾಡಳಿತ‌ ನಿರೀಕ್ಷಕನ ತೋರಿಸಲಾಗಿತ್ತು ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ.

ಅವೈಜ್ಞಾನಿಕವಾಗಿ 24/7 ಕುಡಿಯುವ ನೀರಿನ ಸರಬರಾಜು ಯೋಜನೆ ತೆರಿಗೆಯನ್ನು ವಿಧಿಸಿರುವುದನ್ನು ಪುನರ್ ಪರಿಶೀಲಿಸಬೇಕು ಹಾಗೂ ಈ ಬಗ್ಗೆ ಬಳಕೆದಾರರ, ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಹಾಗೂ ನಾಗರಿಕರ ಸಂಘಟನೆಗಳ ವಿಶೇಷ ಸಭೆ ಕರೆಯುವಂತೆ ಮಹಾಪೌರರಿಗೆ ಮನವಿ ಮಾಡಿದರು ಸಭೆಯನ್ನು ಕರೆಯದೆ ನಿರ್ಲಕ್ಷ ತೋರಿದ್ದಾರೆ ಎಂದರು.

ಇದನ್ನು ಒದಿ : https://cnewstv.in/?p=8969

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*