Breaking News

ಹೊಸಮನೆ ಬಡಾವಣೆಯಲ್ಲಿ ಡಾಂಬರೀಕರಣಕ್ಕೆ ಚಾಲನೆ.

Cnewstv.in / 10.03.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಹೊಸಮನೆ ಬಡಾವಣೆಯಲ್ಲಿ ಡಾಂಬರೀಕರಣಕ್ಕೆ ಚಾಲನೆ.

ಶಿವಮೊಗ್ಗ : ನಗರದ ಹೊಸ ಮನೆ ಬಡಾವಣೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಬಡಾವಣೆಯ ಎಲ್ಲಾ ರಸ್ತೆಗಳಿಗೂ ಡಾಂಬರೀಕರಣಕ್ಕೆ ಇಂದು ಬೆಳಗ್ಗೆ ಶ್ರೀ ವಜ್ರೇಶ್ವರಿ ಗಣಪತಿ ದೇವಸ್ಥಾನದ ಪಕ್ಕದ ರಸ್ತೆಯಿಂದ ಮಹಾನಗರ ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್ ಚಾಲನೆ ನೀಡಿದರು.

 

ನಂತರ ಸ್ಮಾರ್ಟ್ ಸಿಟಿ ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ್ದ ರೇಖಾ ರಂಗನಾಥ್ ರವರು ಈಗಾಗಲೇ ಹೊಸಮನೆ ಬಡಾವಣೆಯೂ ಸಂಪೂರ್ಣ ಸ್ಮಾರ್ಟ್ ಸಿಟಿ ಕಾಮಗಾರಿಗಳು ಮುಗಿಯುವ ಹಂತದಲ್ಲಿ ಬಂದಿದ್ದು ಬಾಕ್ಸ್ ಡ್ರೈನೇಜ್ , ವಿದ್ಯುತ್ ಭೂಗತ ಕೇಬಲ್ಗಳು , 24 X 7 ನೀರಿನ ಸಂಪರ್ಕ, ಪಾರ್ಕಿಂಗ್ ಲಾಕಿಂಗ್ ಟೈಲ್ಸ್ ಗಳು ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಿ ವಾರ್ಡಿನ ಸಾರ್ವಜನಿಕರಿಗೆ ಆಗುತ್ತಿರುವ ಕಿರಿಕಿರಿಯನ್ನು ತಪ್ಪಿಸಬೇಕೆಂದು ತಾಕೀತು ಮಾಡಿದರು.

ಈ ಸಂದರ್ಭದಲ್ಲಿ ಯುವ ಮುಖಂಡರಾದ ಕೆ. ರಂಗನಾಥ್, ವಾರ್ಡಿನ ಪ್ರಮುಖರಾದ ಶಿವಮ್ಮ, ಗಿರಿಜಮ್ಮ, ಯೋಗೀಶ್ ಭಟ್, ಚಂದ್ರು ಗಡ್ಡೆ, ಪ್ರಜ್ವಲ್, ಚೇತನಾ ಹಾಗೂ ವಾರ್ಡಿನ ನಾಗರಿಕರು ಉಪಸ್ಥಿತರಿದ್ದರು.

ಇದನ್ನು ಒದಿ : https://cnewstv.in/?p=8939

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*