Breaking News

ಈಗ ಬಿಜೆಪಿ ಗೆದ್ದಿರುವುದು ಈ ಮೊದಲೇ ಅಧಿಕಾರದಲ್ಲಿದ್ದ ರಾಜ್ಯಗಳಲ್ಲಿ ಮಾತ್ರ.

Cnewstv.in / 10.03.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಈಗ ಬಿಜೆಪಿ ಗೆದ್ದಿರುವುದು ಈ ಮೊದಲೇ ಅಧಿಕಾರದಲ್ಲಿದ್ದ ರಾಜ್ಯಗಳಲ್ಲಿ ಮಾತ್ರ.

ಬೆಂಗಳೂರು: ಸದ್ಯ ನಮ್ಮ ತಪ್ಪಿನಿಂದ ಪಂಜಾಬ್ ನಲ್ಲಿ ಅಧಿಕಾರ ಕಳೆದುಕೊಂಡಿದ್ದೇವೆ ಆದರೆ ಪಂಜಾಬ್ ನಲ್ಲೇನು ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ಬಂದಿರುವುದು ಆಮ್ ಆದ್ಮಿ ಪಕ್ಷ. ನಾವು ಈ ಚುನಾವಣೆಗಳಿಂದ ಬಹಳ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಪಂಚರಾಜ್ಯಗಳಲ್ಲಿ ಒಟ್ಟಾರೆಯಾಗಿ ನಮ್ಮ ಪಕ್ಷ ಅಧಿಕಾರದಲ್ಲಿದ್ದದ್ದೂ ಪಂಜಾಬ್ ನಲ್ಲಿ ಮಾತ್ರ ಬೇರೆ ರಾಜ್ಯಗಳಲ್ಲಿ ನಾವು ಅಧಿಕಾರದಲ್ಲಿರಲಿಲ್ಲ, ನಮ್ಮ ನಿರೀಕ್ಷೆ ಇದ್ದದ್ದೂ ಕೇವಲ ಉತ್ತರಖಂಡ, ಗೋವಾದಲ್ಲಿ ಮಾತ್ರ, ಸದ್ಯ ನಮ್ಮ ತಪ್ಪಿನಿಂದ ಪಂಜಾಬ್ ನಲ್ಲಿ ಅಧಿಕಾರ ಕಳೆದುಕೊಂಡಿದ್ದೇವೆ. ಆದರೆ ಪಂಜಾಬ್ ನಲ್ಲೇನು ಬಿಜೆಪಿ ಅಧಿಕಾರಕ್ಕೆ ಬಂದಿದೆಯಾ? ಬಂದಿರುವುದು ಆಮ್ ಆದ್ಮಿ ಪಕ್ಷ. ನಾವು ಈ ಚುನಾವಣೆಗಳಿಂದ ಬಹಳ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ ಎಂದರು.

ಈಗ ಬಿಜೆಪಿ ಗೆದ್ದಿರುವುದು ಈ ಮೊದಲೇ ಅಧಿಕಾರದಲ್ಲಿದ್ದ ರಾಜ್ಯಗಳಲ್ಲಿ ಮಾತ್ರ. ಸಾಮಾನ್ಯವಾಗಿ ಅಧಿಕಾರದಲ್ಲಿರುವ ಪಕ್ಷಗಳಿಗೆ ಸಂಪನ್ಮೂಲಗಳು ಹೆಚ್ಚಿಗಿರುತ್ತದೇ ಇದೇ ಕಾರಣಕ್ಕೆ ಅವರಿಗೆ ಸ್ವಲ್ಪ ಸುಲಭವಾಗಬಹುದು. ಇದರಿಂದ ಬಹಳ ಜಂಬ ಪಡೋ ಅಗತ್ಯ ಇಲ್ಲ ಎಂದ ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನು ಒದಿ : https://cnewstv.in/?p=8931

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*