Cnewstv.in / 09.03.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಸಾಗರ ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ ಅಡಿಕೆ ಕಳ್ಳರ ಬಂಧನ.
ಶಿವಮೊಗ್ಗ : ಸಾಗರದ ತಲವಾಟ ಗ್ರಾಮದಲ್ಲಿ ಮನೆ ಮುಂದೆ ಒಣಗಿ ಹಾಕಿದ್ದ 21 ಕ್ವಿಂಟಾಲ್ ತೂಕದ ಅಡಿಕೆಯನ್ನು ಕಳ್ಳತನ ಮಾಡಿದ ಆರೋಪಿಗಳನ್ನು ಸಾಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಭಟ್ಕಳದ ಫೈರೋಜ್ ಖಾನ್, ಹಬೀಬ್ ಖಾನ್, ಮಹಮ್ಮದ್ ಮರ್ದಾನ್, ರುಮಾನ್, ಎಂದು ಗುರುತಿಸಲಾಗಿದ್ದು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಒಟ್ಟು 04 ಅಡಿಕೆ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿ ಅಂದಾಜು ಮೌಲ್ಯ 4,70,00/- ರೂ ಮೌಲ್ಯದ ಒಟ್ಟು 23 ಕ್ವಿಂಟಾಲ್ ಸಿಪ್ಪೆ ಗೋಟು ಅಡಿಕೆ ಮತ್ತು ಕೃತ್ಯಕ್ಕೆ ಬಳಸಿದ 1 ಬುಲೇರೋ ಪಿಕಪ್ ವಾಹನವನ್ನು ವಶಪಡಿಸಿ ಕೊಂಡಿರುತ್ತಾರೆ.
ಇದನ್ನು ಒದಿ : https://cnewstv.in/?p=8911
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
C News TV Kannada News Online in cnewstv