Cnewstv.in / 09.03.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಇತಿಹಾಸ ಪ್ರಸಿದ್ಧ ಗಣಪತಿ ಕೆರೆಯಲ್ಲಿ ಪ್ರತ್ಯಕ್ಷವಾದ ಅಪರೂಪದ ನೀರುನಾಯಿಗಳು.
ಶಿವಮೊಗ್ಗ : ಇತಿಹಾಸ ಪ್ರಸಿದ್ಧ ಸಾಗರದ ಗಣಪತಿ ಕೆರೆಯಲ್ಲಿ ಅಪರೂಪದ ನೀರು ನಾಯಿಗಳು ಪ್ರತ್ಯಕ್ಷವಾಗಿದೆ.
ಕಳೆದ ವರ್ಷವೂ ಸಹ ಇದೇ ಸಮಯದಲ್ಲಿ ನೀರು ನಾಯಿಗಳು ಹಿಂಡುಹಿಂಡಾಗಿ ಕಾಣಿಸಿಕೊಂಡಿದ್ದವು ಈ ಬಾರಿಯೂ ಸಹ ಗಣಪತಿ ಕೆರೆಯಲ್ಲಿ ಮತ್ತೆ ದೊಡ್ಡ ಸಂಖ್ಯೆಯಲ್ಲಿ ನೀರು ನಾಯಿಗಳು ಕಾಣಿಸಿಕೊಂಡಿದೆ.
ವರದಾನದಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೀರು ನಾಯಿಗಳು ಕಾಣಿಸಿಕೊಳ್ಳುತ್ತದೆ. ವರದಾ ಉಪನದಿಗಳ ಮೂಲಕ ಸಾಗರದ ಗಣಪತಿ ಕೆರೆಗೆ ನೀರು ನಾಯಿಗಳು ತಲುಪಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮತ್ತೊಂದೆಡೆ ಗಣಪತಿ ಕೆರೆಯಲ್ಲಿ ಭಾರೀ ಸಂಖ್ಯೆಯ ಮೀನು ಸಾಕಾಣಿಕೆ ಮಾಡಲಾಗಿದೆ. ಹಾಗಾಗಿ ಮೀನುಗಳು ಲಭ್ಯವಿರುವುದರಿಂದ ನೀರು ನಾಯಿಗಳ ಹಿಂಡು ಕೆರೆಯಲ್ಲಿ ಪ್ರತ್ಯಕ್ಷವಾಗಿರಬಹುದು ಎಂದು ಕೂಡ ಹೇಳಲಾಗುತ್ತಿದೆ
ಸಾಮಾನ್ಯವಾಗಿ ಸದಾ ಗುಂಪಿನಲ್ಲಿರುವ ಅಪರೂಪದ ಜಲವಾಸಿ ನೀರು ನಾಯಿಗಳನ್ನು ನೋಡಲು ಅನೇಕರು ಕೆರೆಯ ಬಳಿ ಜಮಾಯಿಸುತ್ತಿದ್ದಾರೆ.
ಇದನ್ನು ಒದಿ : https://cnewstv.in/?p=8907
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
C News TV Kannada News Online in cnewstv