Breaking News

ಗಣಿಗಾರಿಕೆಯಲ್ಲಿ ಹೆಚ್ಚಾಗಿ ಲೂಟಿಹೊಡೆದವರು ಬಿಜೆಪಿಯವ್ರು

Cnewstv.in / 07.03.2022 / ಗುಂಡ್ಲುಪೇಟೆ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಗಣಿಗಾರಿಕೆಯಲ್ಲಿ ಹೆಚ್ಚಾಗಿ ಲೂಟಿಹೊಡೆದವರು ಬಿಜೆಪಿಯವ್ರು.

ಗುಂಡ್ಲುಪೇಟೆ : ಗಣಿಗಾರಿಕೆಯಲ್ಲಿ ಹೆಚ್ಚಾಗಿ ಲೂಟಿಹೊಡೆದವರು ಬಿಜೆಪಿಯವ್ರು ಎಂದು ಮಾಜಿ ಸಂಸದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ದೃವನಾರಾಯಣ್ ಹೇಳಿದರು.

ಸಚಿವ ವಿ.ಸೋಮಣ್ಣ ಹೇಳಿಕೆಗೆ ಮಾಜಿ ಸಂಸದ ಆರ್.ದೃವನಾರಾಯಣ್ ತಿರುಗೇಟು ನೀಡಿದರು. ನಮ್ಮ ಸರ್ಕಾರ ಕುರಿತು ಮಾತನಾಡೋ ನೈತಿಕತೆ ನಿಮಗಿಲ್ಲ.

ಸಿದ್ದರಾಮಯ್ಯ ಅವರು ಬಳ್ಳಾರಿಗೆ ಪಾದಯಾತ್ರೆ ನಡೆಸಿದ್ದು ಇದೆ ವಿಚಾರಕ್ಕೆ. ಅನಧಿಕೃತ ಗಣಿಗಾರಿಕೆಗೆ ಬೇಕಾದ್ರೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿ. ಅಕ್ರಮ ಗಣಿಗಾರಿಕೆಯಲ್ಲಿ ಜೈಲು ಸೇರಿದ್ದವರು ಇವರ ಪಕ್ಷದವರೆ. ಜನಾರ್ಧನ್ ರೆಡ್ಡಿ ಜೈಲು ಸೇರಿರಲಿಲ್ಲವೇ ಎಂದವರು.

ನಮ್ಮ ಅವಧಿಯಲ್ಲಿ ನೀಡಿರುವುದು ಅಧಿಕೃತ ಗಣಿಗಾರಿಕೆಗೆ ಮಾತ್ರ ಅವಕಾಶ ನೀಡಿರೋದು. ನಿಮ್ಮಂತೆ ಅಕ್ರಮ ಗಣಿಗಾರಿಕೆಗೆ ಅವಕಾಸ ನೀಡಿಲ್ಲ. ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಪರಿಹಾರ ಕೊಡೋ ಕೆಲ್ಸ ಮಾಡಿ ಎಂದರು.

ಗುಂಡ್ಲುಪೇಟೆಯಲ್ಲಿ ನಡೆದಿರುವ ಘಟನೆ ಕುರಿತು ತನಿಖೆಯಾಗಲಿ ತಪ್ಪಿತಸ್ತರಿಗೆ ಶಿಕ್ಷೆಯಾಗಬೇಕು. ಇಡೀ ಜಿಲ್ಲೆಯಲ್ಲಿ ನಡೆಯುತ್ತಿರುವ ಗಣಿಗಾರಿಕೆ ನಿಲ್ಲಿಸಲು ಸೂಚಿಸಿರುವುದು ಸರಿಯಲ್ಲ…

ಇದನ್ನು ಒದಿ : https://cnewstv.in/?p=8884

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*