Cnewstv.in / 05.03.2022 / ಗುಂಡ್ಲುಪೇಟೆ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ಗುಡ್ಡ ಕುಸಿತ
ಗುಂಡ್ಲುಪೇಟೆ : ಗುಂಡ್ಲುಪೇಟೆ ಬಳಿ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ಗುಡ್ಡ ಕುಸಿತವಾಗಿದ್ದು ಕಾರ್ಮಿಕರ ಮೇಲೆ ಗುಡ್ಡ ಕುಸಿದು ಬಿದ್ದಿದೆ.
ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗುಡ್ಡದಲ್ಲಿ ಘಟನೆ ನಡೆದಿದ್ದು, ಗುಡ್ಡ ಕುಸಿತದಿಂದ ಕೆಳಗಿದ್ದ ಲಾರಿ ಮತ್ತು ಟಿಪ್ಪರ್ ಸಂಪೂರ್ಣ ನುಜ್ಜುಗುಜ್ಜಾಗಿದೆ.
ಇನ್ನು ಟಿಪ್ಪರ್ ಮತ್ತು ಲಾರಿಯಲ್ಲಿದ್ದ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದ್ದು ಇನ್ನುಳಿದವರ ರಕ್ಷಣೆಗಾಗಿ ಅಗ್ನಿಶಾಮಕ ಸಿಬ್ಬಂದಿಗಳು ಸಾಹಸ ಪಡುತ್ತಿದ್ದಾರೆ.
ಸ್ಥಳಕ್ಕೆ ತಹಶಿಲ್ದಾರ್ ರವಿಶಂಕರ್, ಎಎಸ್ಪಿ ಸುಂದರಾಜ್,
ಡಿವೈಎಸ್ಪಿ ಪ್ರಿಯದರ್ಶಿನಿ ಸಾನಿಕೊಪ್ಪ ಭೇಟಿ ನೀಡಿದರು.
ಇದನ್ನು ಒದಿ : https://cnewstv.in/?p=8855
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
C News TV Kannada News Online in cnewstv