Breaking News

ಶಿವಮೊಗ್ಗದಲ್ಲಿ ಹಿಂದೂ ಯುವಕರ ಆಕ್ರೋಶ ಇನ್ನು ಮುಗಿದಿಲ್ಲ ಇದರ ಮಧ್ಯೆ ಇಂಥ ಘಟನೆ ನಡೆದಿದೆ – ಸಚಿವ ಈಶ್ವರಪ್ಪ..

Cnewstv.in / 05.03.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಶಿವಮೊಗ್ಗದಲ್ಲಿ ಹಿಂದೂ ಯುವಕರ ಆಕ್ರೋಶ ಇನ್ನು ಮುಗಿದಿಲ್ಲ ಇದರ ಮಧ್ಯೆ ಇಂಥ ಘಟನೆ ನಡೆದಿದೆ. ವೆಂಕಟೇಶ ಅರೋಗ್ಯ ‌ವಿಚಾರಿಸಿದ – ಸಚಿವ ಈಶ್ವರಪ್ಪ..

ಶಿವಮೊಗ್ಗ : ಮೊನ್ನೆ ರಾತ್ರಿ ದುಷ್ಕರ್ಮಿಗಳು ವಾಕಿಂಗ್ ಹೋಗುತ್ತಿದ್ದ ವ್ಯಕ್ತಿಯ ಮೇಲೆ ಕಲ್ಲು ತೂರಾಟ ನಡೆಸಿದರು. ಪರಿಣಾಮವಾಗಿ ವೆಂಕಟೇಶ್ ಎಂಬುವವರು ಗಾಯಗೊಂಡಿದ್ದು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಸಚಿವರಾದ ಕೆಎಸ್ ಈಶ್ವರಪ್ಪನವರು ಆಸ್ಪತ್ರೆಗೆ ಭೇಟಿ ನೀಡಿ ವೆಂಕಟೇಶ್ ಅವರ ಆರೋಗ್ಯ ವಿಚಾರಿಸಿದರು.

ಶಿವಮೊಗ್ಗದಲ್ಲಿ ಹಿಂದೂ ಯುವಕರ ಆಕ್ರೋಶ ಇನ್ನೂ ಮುಗಿದಿಲ್ಲ..

ಹರ್ಷ ಕೊಲೆಯ ನಂತರ ಹಿಂದೂ ಯುವಕರಿಗೆ ಶಿವಮೊಗ್ಗದಲ್ಲಿ ಆ ನೋವು ಆಕ್ರೋಶ ಇನ್ನು ಮುಗಿದಿಲ್ಲ. ಈಗಾಗಲೇ ರಾಜ್ಯ ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಅದನ್ನ ತೆಗೆದುಕೊಂಡಿದೆ. ಕೊಲೆಯ ಆರೋಪಿಗಳನ್ನು ಬಂಧಿಸಲಾಗಿದೆ.‌ ಇದರ ಹಿಂದೆ ಷಡ್ಯಂತರ ಮಾಡಿರುವ ಎಲ್ಲದರ ಬಗ್ಗೆ ತನಿಖೆ ನಡೆಯುತ್ತಿದೆ.‌

ಇದೆಲ್ಲದರ ಮಧ್ಯೆ ಮುಸಲ್ಮಾನ್ ಗೂಂಡಾಗಳ ಮಾನಸಿಕತೆ ಇನ್ನೂ ಕಡಿಮೆಯಾಗಿಲ್ಲ. ವಾಕಿಂಗ್ ಹೋಗುತ್ತಿದ್ದ ವೆಂಕಟೇಶ್ ಅವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.‌ ಈ ಮಾನಸಿಕತೆಯಿಂದ ಕೆಲವು ಮುಸಲ್ಮಾನ್ ಗುಂಡಗಳು ಮಾಡುತ್ತಿರುವ ಕೆಲಸ ಇಡಿ ಮುಸಲ್ಮಾನ್ ಸಮಾಜಕ್ಕೆ ಪರಿಣಾಮವಾಗುತ್ತಿದೆ.

ಶಿವಮೊಗ್ಗದ ಎಲ್ಲಾ ಮುಸಲ್ಮಾನರು ಕೆಟ್ಟೋರು ಎಂದು ಹೇಳುತ್ತಿಲ್ಲ ಆದರೆ ಕೆಲವರು ಮಾಡುತ್ತಿರುವ ಕೆಲಸ ಎಲ್ಲಾ ಮುಸಲ್ಮಾನರಿಗೆ ಪರಿಣಾಮವಾಗುತ್ತಿದೆ. ಗೂಂಡಾ ಮುಸಲ್ಮಾನರ ಮೇಲೆ ಹಿಡಿತ ಸಾಧಿಸಬೇಕು ಎಂದು ಮುಸಲ್ಮಾನ್ ನಾಯಕರಿಗೆ ಕೇಳಿಕೊಂಡರು.

ಇದನ್ನು ಒದಿ : https://cnewstv.in/?p=8845

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*