Breaking News

ಶಿವರಾತ್ರಿ : ಬಿಸಿಲನ್ನು ಲೆಕ್ಕಿಸದೆ ದರ್ಶನಕ್ಕಾಗಿ ಸಾಲಿನಲ್ಲಿ ನಿಂತಿರುವ ಜನ.

Cnewstv.in / 01.03.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಶಿವರಾತ್ರಿ : ಬಿಸಿಲನ್ನು ಲೆಕ್ಕಿಸದೆ ದರ್ಶನಕ್ಕಾಗಿ ಸಾಲಿನಲ್ಲಿ ನಿಂತಿರುವ ಜನ.

ಶಿವಮೊಗ್ಗ : ನಗರಾದ್ಯಂತ ಸಂಭ್ರಮದಿಂದ ಶಿವರಾತ್ರಿಯ ಹಬ್ಬವನ್ನು ಆಚರಿಸಲಾಗುತ್ತಿದೆ. ಬೆಳಗ್ಗೆನೇ ಶಿವಾಲಯದಲ್ಲಿ ದೇವರಿಗೆ ಅಭಿಷೇಕ ಮಾಡಿ,‌‌ ವಿಶೇಷವಾದ ಅಲಂಕಾರ ಮಾಡಲಾಗಿತ್ತು.

ದೇವರ ದರ್ಶನಕ್ಕಾಗಿ ಜನರು ಬಿಸಿಲನ್ನು ಲೆಕ್ಕಿಸದೆ ಸರದಿ ಸಾಲಿನಲ್ಲಿ ನಿಂತಿದ್ದಾರೆ. ವಿನೋಬನಗರದ ಶಿವಾಲಯದಲ್ಲಿ ದೇವರ ದರ್ಶನಕ್ಕಾಗಿ ಭಕ್ತರು ಪೊಲೀಸ್ ಚೌಕಿಯ ವರಿಗೂ ಸರತಿಯ ಸಾಲಿನಲ್ಲಿ ನಿಂತಿದ್ದಾರೆ.

ಸಾಮಾನ್ಯವಾಗಿ ರಾತ್ರಿ ಸಹ ದೇವರ ದರ್ಶನಕ್ಕೆ ಅವಕಾಶವಿರುತ್ತಿತ್ತು ಆದರೆ ನಗರದಲ್ಲಿ ಸೆಕ್ಷನ್ 144 ಜಾರಿಯಲ್ಲಿರುವುದರಿಂದ ಸಂಜೆ 6 ಗಂಟೆಯವರೆಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಹಾಗಾಗಿ ಪ್ರತಿ ವರ್ಷಕ್ಕಿಂತಲೂ ಇಂದು ಬೆಳಗಿನಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸುತ್ತಿದ್ದಾರೆ.

ಮತ್ತೊಂದೆಡೆ ಬಿಸಿಲಿನಲ್ಲಿ‌ ನಿಂತು ನೀರಡಿಕೆ ಯಾಗಿರುವ
ಭಕ್ತರಿಗೆ ಅನೇಕ ಸ್ವಯಂಸೇವಕರು ಪಾನಕ ಮಜ್ಜಿಗೆ ನೀರನ್ನೂ ನೀಡುತ್ತಿದ್ದಾರೆ.

ಇದನ್ನು ಒದಿ : https://cnewstv.in/?p=8777

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*