Breaking News

ಹೊಸ ದಾಖಲೆ ಬರೆದ ನೈರುತ್ಯ ರೈಲ್ವೆ ವಲಯ

Cnewstv.in / 28.02.2022 / ಹುಬ್ಬಳ್ಳಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಹೊಸ ದಾಖಲೆ ಬರೆದ ನೈರುತ್ಯ ರೈಲ್ವೆ ವಲಯ

ಹುಬ್ಬಳ್ಳಿ : ನೈರುತ್ಯ ರೈಲ್ವೆ ವಲಯ ಹೊಸ ದಾಖಲೆಯನ್ನು ಮಾಡಿದೆ.

ನೈರುತ್ಯ ರೈಲ್ವೆ ವಲಯ ಸರಕು ಸಾಗಣೆಯಲ್ಲಿ ಬರೋಬ್ಬರಿ 38.9 6 ಮಿಲಿಯನ್ ಟನ್ ಗಳಷ್ಟು ಲೋಡಿಂಗ್ ಮಾಡಿದೆ. ಹಾಗೂ ಪಾರ್ಸೆಲ್ ಆದಾಯದಲ್ಲಿ ನೈರುತ್ಯ ರೈಲ್ವೆಯು 105 ಕೋಟಿ ರೂಪಾಯಿ ಆದಾಯ ಗಳಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ. ಇದು ವಲಯ ರಚನೆಯಾದ ನಂತರ ಗರಿಷ್ಠ ಆದಾಯ ವಾಗಿದೆ.

ಕಳೆದ ಹಣಕಾಸು ವರ್ಷದ ಒಟ್ಟು ಲೋಡಿಂಗ್ ಮೀರಿದೆ.‌ 2020 ಫೆ. 18 ರಿಂದ 38.19 ಮಿಲಿಯನ್ ಟನ್ ಗಳ ಲೋಡಿಂಗ್ ಮಾಡಿದೆ ಇದು ಕಳೆದ ವರ್ಷದ ಹಣಕಾಸು ವರ್ಷಕ್ಕಿಂತ ಅಧಿಕವಾಗಿದೆ.

ಟೊಯೋಟಾ ತಮ್ಮ ವಾಹನಗಳ ಸಾಗಾಣಿಕೆಗಾಗಿ ರಸ್ತೆ ಮಾರ್ಗ ಬದಲು, ರೈಲ್ವೆ ಆಯ್ಕೆ ಮಾಡಿಕೊಂಡಿರುವುದು ಗಮನಾರ್ಹ. ಟಿವಿಎಸ್ ಮಾರುತಿ ಸುಜುಕಿ ರೈಲ್ವೆ ಮೂಲಕವಾಗಿ ವಾಹನಗಳನ್ನು ಸಾಗಿಸುವ ಕೆಲವು ಪ್ರಮುಖ ಗ್ರಾಹಕರಾಗಿದ್ದಾರೆ.

ಬೆಂಗಳೂರು ವಿಭಾಗವು ದೆಹಲಿ ಮತ್ತು ಉತ್ತರ ಭಾರತದ ಇತರ ನಗರಗಳಿಗೆ 33 ಕಿಸಾನ್‌ ಸ್ಪೆಷಲ್‌ ರೈಲುಗಳನ್ನು ರವಾನಿಸಿದೆ. ಇದರಿಂದ ರೈತರು ಸರಕು ಸಾಗಣೆಯಲ್ಲಿ ಶೇ.50 ಸಬ್ಸಿಡಿ ಮತ್ತು ದೊಡ್ಡ ಮಾರುಕಟ್ಟೆಗಳಿಗೆ ಪ್ರವೇಶ ಪಡೆದಿದ್ದಾರೆ.

ಸಕ್ಕರೆಯ ಲೋಡಿಂಗ್‌ನಲ್ಲಿ ಇಲ್ಲಿಯವರೆಗೆ 355 ರೇಕ್‌ಗಳನ್ನು ಸಾಗಿಸುವ ಮೂಲಕ ಕಳೆದ 18 ವರ್ಷದ ಅವಧಿಯಲ್ಲಿ ಅತಿ ಹೆಚ್ಚು ಸಕ್ಕರೆ ರೇಕು ಸಾಗಾಣಿಕೆ ಮಾಡಿದಂತಾಗಿದೆ. ಸಕ್ಕರೆ ಪ್ರಾಥಮಿಕವಾಗಿ ಬೆಳಗಾವಿ-ರಾಯಬಾಗ-ಚಿಕ್ಕೋಡಿ ಪ್ರದೇಶದಿಂದ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಬಾಂಗ್ಲಾದೇಶಕ್ಕೆ ರವಾನೆಯಾಗುತ್ತದೆ. ಸಿಮೆಂಟ್‌ ಸಾಗಣೆ ಬೇಡಿಕೆ ಸದುಪಯೋಗ ಮಾಡಿಕೊಂಡು ಹಾಗೂ ವ್ಯಾಪಾರ ಅಭಿವೃದ್ಧಿ ಘಟಕಗಳ ಸಕ್ರಿಯ ಮಾರುಕಟ್ಟೆ ಪ್ರಯತ್ನಗಳೊಂದಿಗೆ ಕಳೆದ ವರ್ಷದ 217 ರೇಕ್‌ ಗಳಿಗೆ ಹೋಲಿಸಿದರೆ ಇಲ್ಲಿಯವರೆಗೆ 265 ರೇಕ್‌ಗಳನ್ನು ಲೋಡ್‌ ಮಾಡಲಾಗಿದೆ.

ಇದನ್ನು ಒದಿ : https://cnewstv.in/?p=8761

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*