Breaking News

ಬಿಬಿಎಂಪಿ ಅಧಿಕಾರಿಗಳ‌ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಅರೋಪಿಗಳ ಬಂಧನ.

Cnewstv.in / 27.02.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಬೆಂಗಳೂರು : ಬಿಬಿಎಂಪಿ ವಾರ್ಡ್‌ನ ಕಚೇರಿ ಅಧಿಕಾರಿಗಳು ಎಂಬ ಹೆಸರಿನಲ್ಲಿ, ಶಿಕ್ಷಕರನ್ನೇ ಗುರಿಯಾಗಿಸಿಕೊಂಡು ಕರೆ ಮಾಡಿ ಒಟಿಪಿ ಪಡೆದು ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದ ಇಬ್ಬರು ಆರೋಪಿಗಳನ್ನು ಈಶಾನ್ಯ ವಿಭಾಗದ ಸೆನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೀದರ್‌ ಮೂಲದ ಶಿವಪ್ರಸಾದ್‌ (33), ದೆಹಲಿ ಮೂಲದ ಪಂಕಜ್‌ ಚೌಧರಿ (24) ಬಂಧಿತರು.ಆರೋಪಿಗಳಿಂದ 22 ಸಾವಿರ ನಗದು, 9 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ಪೈಕಿ ಶಿವಪ್ರಸಾದ್‌ ತಂದೆ ಶಿಕ್ಷಕರಾಗಿದ್ದು, ಸರ್ಕಾರದ ಕೆಲ ಇಲಾಖೆಗಳು ಸೂಚಿಸಿದ ಸರ್ವೆ ಕೆಲಸ ಹಾಗೂ ಇತರೆ ಕರ್ತವ್ಯಗಳ ನಿಯೋಜಿಸಲಾಗುತ್ತಿತ್ತು. ಕೆಲಸ ಮುಗಿದ ನಾಲ್ಕೈದು ತಿಂಗಳ ಬಳಿಕ ಅವರ ಖಾತೆಗೆ ಹಣ ಜಮೆಯಾಗುತ್ತಿತ್ತು. ಈ ವೇಳೆ ಕೆಲವು ಬಾರಿ ಒಟಿಪಿ ಪಡೆದು ಹಣ ವರ್ಗಾವಣೆ ಮಾಡುತ್ತಿರುವುದನ್ನು ಗಮನಿಸಿದ್ದ. ಹೀಗಾಗಿ ಆರೋಪಿ ಶಿಕ್ಷಕರನ್ನೇ ಗುರಿಯಾಗಿಸಿಕೊಂಡು ವಂಚನೆ ಆರಂಭಿಸಿದ್ದಾನೆ.

ಅದಕ್ಕಾಗಿ ನಿರ್ದಿಷ್ಟ ವೆಬ್‌ಸೈಟ್‌, ಗೂಗಲ್‌ ಮೂಲಕ ಶಿಕ್ಷಕರ ಮೊಬೈಲ್‌ ನಂಬರ್‌, ಖಾತೆಗಳ ಸಂಖ್ಯೆ ಪಡೆದುಕೊಂಡಿದ್ದಾನೆ. ಈ ಮಧ್ಯೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೂತ್‌ ಮಟ್ಟದ ಅಧಿಕಾರಿಗಳಾಗಿ(ಬಿಎಲ್‌ಒ) ಶಿಕ್ಷಕರನ್ನು ನೇಮಿಸಲಾಗುತ್ತಿದೆ. ಅದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಆರೋಪಿ, ಶಿಕ್ಷಕರ ಮೊಬೈಲ್‌ಗೆ ಕರೆ ಮಾಡಿ ಸರ್ವೆ ಕೆಲಸ ಮಾಡಿರುವುದಕ್ಕೆ ನಿಮ್ಮ ಖಾತೆಗೆ ಹಣ ಜಮೆ ಮಾಡಲುಯತ್ನಿಸಲಾಗುತ್ತಿದೆ. ಆದರೆ, ತಾಂತ್ರಿಕ ಸಮಸ್ಯೆಯಿಂದ ಜಮೆಯಾಗುತ್ತಿಲ್ಲ. ಹೀಗಾಗಿ, ನಿಮ್ಮ ಮೊಬೈಲ್‌ಗೆ ಒಟಿಪಿ ಸಂಖ್ಯೆ ಬರಲಿದೆ ಅದನ್ನು ಹೇಳಿದರೆ ಕೂಡಲೇ ಹಣ ಜಮೆಯಾಗುವುದು ಎಂದು ನಂಬಿಸುತ್ತಿದ್ದ. ಒಟಿಪಿ ಪಡೆದುಕೊಂಡ ಕೆಲ ಹೊತ್ತಿನಲ್ಲಿಯೇ ಶಿಕ್ಷಕರ ಖಾತೆಯಿಂದ ತಮ್ಮ ನಕಲಿ ಖಾತೆಗೆ ಹಣ ಜಮೆ ಮಾಡಿಕೊಂಡು ಮೊಬೈಲ್‌ ಸ್ವಿಚ್ಡ್ ಆಪ್‌ ಮಾಡಿಕೊಳ್ಳುತ್ತಿದ್ದ ಎಂದು ಸೆನ್‌ ಠಾಣೆ ಪೊಲೀಸರು ಹೇಳಿದರು.

ಆರೋಪಿ ಇತ್ತೀಚೆಗೆ ನಗರದ ಶಿಕ್ಷಕಿಯೊಬ್ಬರಿಗೆ ಬಿಬಿಎಂಪಿ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿದ್ದ ಆರೋಪಿ, ಬೂತ್‌ ಹಂತದ ಕಚೇರಿಯ ಅಲೆಯನ್ಸ್‌ ಶುಲ್ಕ ಪಾವತಿಸಲಾಗುತ್ತಿದೆ. ಹೀಗಾಗಿ, ನಿಮ್ಮಡೆಬಿಟ್‌ ಕಾರ್ಡ್‌ ಸಂಖ್ಯೆ, ಸಿವಿವಿ, ಎಕ್ಸ್‌ಪೆರಿಡೇಟ್‌ ಹಾಗೂ ಒಟಿಪಿ ಹೇಳಿ ಎಂದು ಒಟಿಪಿ ಪಡೆದು ಆ ಶಿಕ್ಷಕರಖಾತೆಯಿಂದ 17,111 ರೂ. ಅನ್ನು ತಮ್ಮ ನಕಲಿ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದ. ಈ ಸಂಬಂಧ ವಂಚನೆಗೊಳಗಾದ ಶಿಕ್ಷಕರು ಈಶಾನ್ಯ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ.

ಇದನ್ನು ಒದಿ : https://cnewstv.in/?p=8751

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*