Breaking News

ಸಂತರ ನಡೆ ಸಾಂತ್ವನದ ಕಡೆ.

Cnewstv.in / 26.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಸಂತರ ನಡೆ ಸಾಂತ್ವನದ ಕಡೆ.

ಶಿವಮೊಗ್ಗ : ಬಜರಂಗದಳ ಕಾರ್ಯಕರ್ತ ಹರ್ಷ ಕುಟುಂಬವನ್ನು ಇಂದು ವಿವಿಧ ಮಠಾಧೀಶರು ಭೇಟಿ ಮಾಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.‌

ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ವಿವಿಧ ಮಠಾಧೀಶರು ಇಂದು ಭೇಟಿ ನೀಡಿದರು.‌ ನಂತರ ಮಾತನಾಡಿದ ಶರಣರು, ಸಂತರ ನಡೆ ಸಾಂತ್ವನದ ಕಡೆಗೆ ಎಂಬಂತೆ ನಾವೆಲ್ಲಾ ಮಠಾಧೀಶರು ಹರ್ಷ ಅವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಆತ್ಮಸ್ಥೈರ್ಯವನ್ನು ಹೇಳಿದ್ದೇವೆ.‌

ಹರ್ಷ ಹತ್ಯೆಯಾಗಿರುವ ಅತ್ಯಂತ ನೋವಿನ ಸಂಗತಿ.‌ ದೇಶದಲ್ಲಿ ಎಲ್ಲರೂ ಪರಸ್ಪರ ಭಾವೈಕ್ಯತೆಯಿಂದ ಜೀವನ ನಡೆಸಬೇಕು. ಈ ರೀತಿಯ ಹಿಂಸಾತ್ಮಕ ಸಂಘರ್ಷ ಯಾರಿಗೂ ಒಳ್ಳೆಯದಲ್ಲ.‌ ಸಮಾಜದಲ್ಲಿ ಎಲ್ಲರೂ ಶಾಂತಿ ಸೌಹಾರ್ದತೆ ಮತ್ತು ಸಾಮರಸ್ಯದ ಭಾವನೆ ನಮೂದಿಸಬೇಕು ಇದೇ ಉದ್ದೇಶಕ್ಕಾಗಿ ನಾವೆಲ್ಲ ಮಠಾಧೀಶರು ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದೇವೆ ಎಂದರು.

ಇದನ್ನು ಒದಿ : https://cnewstv.in/?p=8742

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*