Breaking News

ಬೆಳಗಿನಜಾವ 2 ಗಂಟೆಗೆ ವಿಧಾನಸಭೆ ಅಧಿವೇಶನ..

Cnewstv.in / 26.02.2022 / ಪಶ್ಚಿಮ ಬಂಗಾಳ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಬೆಳಗಿನಜಾವ 2 ಗಂಟೆಗೆ ವಿಧಾನಸಭೆ ಅಧಿವೇಶನ..

ಕೊಲ್ಕತ್ತಾ : ವಿಧಾನಸಭಾ ಅಧಿವೇಶನ ಕಲಾಪಗಳು ಸಾಮಾನ್ಯವಾಗಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯುತ್ತದೆ. ಆದರೆ ಪಶ್ಚಿಮಬಂಗಾಳದ ವಿಧಾನಸಭಾ ಅಧಿವೇಶನ ಬೆಳಗ್ಗಿನ ಜಾವ 2 ಗಂಟೆಗೆ ನಡೆಯಲಿದೆಯಂತೆ..

ಹೌದು ರಾಜ್ಯಪಾಲ ಜಗದೀಪ್ ಧನ್ಕರ್ ಹೊರಡಿಸಿರುವ ಅಧಿಸೂಚನೆಯಲ್ಲಿ ಮಾರ್ಚ್ 7 ರಂದು ಪಶ್ಚಿಮಬಂಗಾಳದ ವಿಧಾನಸಭೆಯ ಅಧಿವೇಶನ ಬೆಳಗ್ಗಿನ ಜಾವ 2 ಗಂಟೆಗೆ ಕರೆಯಲಾಗಿದೆ..

ಟೈಪಿಂಗ್ ನಲ್ಲಾದ ದೋಷದಿಂದಾಗಿ ಅಪರಾಹ್ನದ ಬದಲಾಗಿ ಬೆಳಗ್ಗಿನ ಜಾವ ಆಗಿರಬಹುದು ಎಂದು ವಿಧಾನಸಭೆಯ ಸ್ಪೀಕರ್ ಸ್ಪಷ್ಟನೆ ನೀಡಿದ್ದಾರೆ. ಆದರೂ ಸಹ ಈ‌ ಅಧಿಸೂಚನೆ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ..

ಇದನ್ನು ಸರಿಪಡಿಸುವ ವಿಚಾರ ಸಂಪುಟಕ್ಕೆ ಬಿಟ್ಟದ್ದು ಸಂಪುಟ ವಿಧಾನಸಭೆ ಅಧಿವೇಶನದ ಪರಿಷ್ಕೃತ ವೇಳಾಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಸಿ ಹೊಸದಾಗಿ ಅಧಿಸೂಚನೆಯನ್ನು ಹೊರಡಿಸಬಹುದು ಎಂದು ತಿಳಿಸಿದ್ದಾರೆ

ಇದನ್ನು ಒದಿ : https://cnewstv.in/?p=8733

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*