Breaking News

ಹರ್ಷ ಹತ್ಯೆ ಪ್ರಕರಣ : ಕುಟುಂಬಸ್ಥರನ್ನು ಭೇಟಿಯಾದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್.

Cnewstv.in / 23.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಹರ್ಷ ಹತ್ಯೆ ಪ್ರಕರಣ : ಕುಟುಂಬಸ್ಥರನ್ನು ಭೇಟಿಯಾದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್.

ಶಿವಮೊಗ್ಗ : ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಯಾದ ಹಿನ್ನೆಲೆಯಲ್ಲಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕುಟುಂಬಸ್ಥರ ಭೇಟಿಯಾಗಿ, ಬಿಜೆಪಿ ಪಕ್ಷದಿಂದ ಮೃತನ ಕುಟುಂಬಕ್ಕೆ ಪರಿಹಾರವಾಗಿ 10 ಲಕ್ಷ‌ರೂ ಚೆಕ್ ವಿತರಿಸಿದರು.

ಇಂದು ನಗರಕ್ಕೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಕೆಎಸ್ ಈಶ್ವರಪ್ಪನವರು ಸ್ವಾಗತಿಸಿದರು. ನಂತರ ಹರ್ಷ ಹತ್ಯೆಗೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಗಳನ್ನು ನೀಡಿದರು. ಇದು ಹರ್ಷನ ಕುಟುಂಬಸ್ಥರನ್ನು ಭೇಟಿಯಾದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ತನಿಖೆ ನಮ್ಮ ಸರ್ಕಾರ ಮಾಡುತ್ತದೆ. ಇದರ ಹಿಂದೆ ಯಾವುದೇ ಕಾಣದ ಶಕ್ತಿಗಳು ಇದ್ದರೂ ಸಹ ಸಂಪೂರ್ಣ ತನಿಖೆ ಮಾಡಿ ಅವರನ್ನು ಬಂಧಿಸಿ, ಶಿಕ್ಷ ಕೊಡಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಈ ರೀತಿ ಘಟನೆಗಳು ನಡೆಯದಂತೆ ನಮ್ಮ ಸರ್ಕಾರ ಕಠೋರವಾದ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದರು.

ಇದನ್ನು ಒದಿ : https://cnewstv.in/?p=8671

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*