Cnewstv.in / 23.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Harsha’s isn’t isolated murder but act of terror. Need to prosecute u/s 16 of UAPA.. ಹಿಂದೂ ಸಮಾಜದಲ್ಲಿ ಭಯ ಹುಟ್ಟಿಸಬೇಕು ಅಂತ ಮಾಡಿರುವ ಕೃತ್ಯವಿದು : ಸಂಸದ ತೇಜಸ್ವಿ ಸೂರ್ಯ
ಶಿವಮೊಗ್ಗ : ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಹಿನ್ನೆಲೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಹರ್ಷ
ಕುಟುಂಬಸ್ಥರ ಭೇಟಿಯಾಗಿ ಸಾಂತ್ವನ ಹೇಳಿದರು.
ಹರ್ಷನ ಹತ್ಯೆಯನ್ನು ಕೊಲೆ ಎಂದು ಪರಿಗಣಿಸದೆ ಅದನ್ನು ಭಯೋತ್ಪಾದಕ ಕೃತ್ಯ ಎಂದು ಪರಿಗಣಿಸಬೇಕು. ಈ ಹಿಂದೆ ಹತ್ಯೆಗೊಳಗಾದ ಹಿಂದೂ ಕಾರ್ಯಕರ್ತರ ಮಾದರಿಯಲ್ಲಿಯೇ ಹರ್ಷ ನನ್ನ ಕೊಲೆ ಮಾಡಲಾಗಿದೆ. ಹಿಂದೂ ಸಮಾಜದಲ್ಲಿ ಭಯ ಹುಟ್ಟಿಸಬೇಕು ಅಂತ ಮಾಡಿರುವ ಕೃತ್ಯವಿದು ಎಂದರು.
ಕರ್ನಾಟಕಕ್ಕೆ ಒಂದು NIA ಕ್ಯಾಂಪ್ ಆಫೀಸ್ ಬರಬೇಕು. ಹರ್ಷನ ಹತ್ಯೆಯಲ್ಲಿ ಬಂಧಿತರಾಗಿರುವರ ಹಿಂದೆ ಬೇರೆಯವರು ಇದ್ದಾರೆ. ಸಂಚು ರೂಪಿಸಿದವರನ್ನು ಬಯಲಿಗೆಳೆಯಬೇಕು.. ಶರತ್ ಮಡಿವಾಳ, ರುದ್ರೇಶ್ ಹೀಗೆ ಹಲವಾರು ಕಾರ್ಯಕರ್ತರನ್ನ ಕಳೆದುಕೊಂಡಿದ್ದೇವೆ ಅವರ ಪಟ್ಟಿ ಬೆಳೆಯುತ್ತಲೇ ಇದೆ ಇದಕ್ಕೆ ಒಂದು ಶಾಶ್ವತ ಅಂತ್ಯ ಕಾಣಿಸಲೇಬೇಕು.
ಹರ್ಷ ನಂತರ ನಾವು ಯಾವ ಕಾರ್ಯಕರ್ತನ ಕಳೆದುಕೊಳ್ಳಬಾರದು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂಬ ವಿಶ್ವಾಸವಿದೆ.
ಭಾರತೀಯ ಜನತಾ ಪಾರ್ಟಿ ಇವತ್ತು ಕೇಂದ್ರದಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿ ಇದೆ ಅಂದರೆ ಅದು ಹಿಂದುತ್ವದ ಪರವಾಗಿ ಈ ರೀತಿ ಸೇವೆ, ತ್ಯಾಗ, ಬೆವರು, ರಕ್ತ ಹರಿಸಿರುವ ಕಾರ್ಯಕರ್ತರ ಪರಿಶ್ರಮ ಶಕ್ತಿ ತ್ಯಾಗದಿಂದ ಇರುವುದು. ನಮ್ಮ ಕಮಿಟ್ಮೆಂಟ್ ಯಾರೂ ಕೂಡ ಪ್ರಶ್ನೆ ಮಾಡಲು ಸಾಧ್ಯ ಇಲ್ಲ.
ಹಿಂದೆ ಬೇರೆ ಸರ್ಕಾರವಿದ್ದಾಗ ನಾವು ನ್ಯಾಯಕ್ಕಾಗಿ ಪ್ರತಿಭಟನೆ ಮಾಡಬೇಕಿತ್ತು, ಹೋರಾಟ ಮಾಡಬೇಕಿತ್ತು. ಆದರೆ ಈಗ ನಮ್ಮದೇ ಸರ್ಕಾರವಿದೆ ಹಿಂದೂಪರ ಕಾರ್ಯಕರ್ತರ ಬಗ್ಗೆ ಬದ್ಧತೆ ಇದೆ. ಹರ್ಷ ಕುಟುಂಬಕ್ಕೆ ನ್ಯಾಯ ಸಿಗಲಿದೆ ಎಂದರು.
ಇದನ್ನು ಒದಿ : https://cnewstv.in/?p=8666
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments