Cnewstv.in / 22.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಹರ್ಷ ಹತ್ಯೆ ಪ್ರಕರಣ : 6 ಅರೋಪಿಗಳ ಬಂಧನ.
ಶಿವಮೊಗ್ಗ : ಭಜರಂಗದಳದ ಕಾರ್ಯಕರ್ತನಾದ ಹರ್ಷ (28) ಭಾನುವಾರ ರಾತ್ರಿ ಹೋಟೆಲ್ ಗೆ ಹೋಗಿ ಊಟ ಮಾಡಿಕೊಂಡು ಬರುವಾಗ ಯಾರೋ ದುಷ್ಕರ್ಮಿಗಳು ಕಾಮತ್ ಪೆಟ್ರೋಲ್ ಬಂಕ್ ಎದುರು ಭಾರತೀ ಕಾಲೋನಿ ಕ್ರಾಸ್ ನ ರಸ್ತೆಯಲ್ಲಿ ಹರ್ಷನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೆನ್ನೆ ಇಬ್ಬರು ಆರೋಪಿತರಾದ ಎ-1 ಮಹಮ್ಮದ್ ಖಾಸಿಫ್ (30)ಬುದ್ಧಾನಗರ, ಎ-2 ಸೈಯ್ಯದ್ ನಧೀಂ (20)ಜೆಪಿ ನಗರ, ಶಿವಮೊಗ್ಗ ಇವರುಗಳನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿರುತ್ತದೆ.
ನಂತರ ಇಂದು ಎ-3 ರಿಹಾನ್ ಶರೀಫ್(22 ) ಕ್ಲಾರ್ಕ್ ಪೇಟೆ, ಎ-4 ಆಸಿಫ್ ಉಲ್ಲಾಖಾನ್( 22)ಕ್ಲಾರ್ಕ್ ಪೇಟೆ, ಎ-5 ಅಬ್ದುಲ್ ಅಫಾನ್(21) ಟ್ಯಾಂಕ್ ಮೊಹಲ್ಲಾ, ಎ-6 ನಿಹಾನ್,(21) ಮುರಾದ್ ನಗರ, ಶಾದಿ ಮಹಲ್, ಶಿವಮೊಗ್ಗರವರನ್ನು ದಸ್ತಗಿರಿ ಮಾಡಿ ತನಿಖೆ ಕೈಗೊಂಡಿರುತ್ತಾರೆ.
ಇದನ್ನು ಒದಿ : https://cnewstv.in/?p=8663
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments