Cnewstv.in / 21.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಶಿವಮೊಗ್ಗ ಇತಿಹಾಸದಲ್ಲಿಯೇ ಈ ರೀತಿಯ ಘಟನೆ ನಡೆದಿರಲಿಲ್ಲ. ಸತ್ಯ ಹೊರಬರಲು NIA ತನಿಖೆ ಆಗಬೇಕು.
ಶಿವಮೊಗ್ಗ : ಶಿವಮೊಗ್ಗದ ಇತಿಹಾಸದಲ್ಲೇ ಈ ರೀತಿಯ ಘಟನೆ ನಡೆದಿರಲಿಲ್ಲ. ಸತ್ಯ ಹೊರಬರಲು NIA ತನಿಖೆ ಅಗಬೇಕು ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಇಂದು ನಗರದಲ್ಲಿ ನಡೆದ ಗಲಾಟೆ ಪೂರ್ವ ನಿಯೋಜಿತ ಷಡ್ಯಂತರ. ನಮ್ಮ ಹಿಂದೂ ಕಾರ್ಯಕರ್ತರ ಕಗ್ಗೊಲೆ ಯಾಗಿದೆ. ಇಷ್ಟು ದೊಡ್ಡ ಪ್ರಮಾಣದ ಗಲಾಟೆ ಆಗಲು ಯಾರು ಕಾರಣವೇನು ?? ಇದೆಲ್ಲದರ ಹಿಂದೆ ಯಾರಿದ್ದಾರೆ ಎಂದು ತನಿಖೆಯಿಂದ ಹೊರಗಡೆ ಬರಬೇಕು. ಎನ್ಐಎ ಮೂಲಕ ತನಿಖೆ ಮಾಡುವಂತೆ ಆಗ್ರಹಿಸುತ್ತೇವೆ. ನಾಳೆಗೆ ಈ ಬಗ್ಗೆ ಸಿಎಂ ಬೊಮ್ಮಾಯಿ ಯವರಿಗೆ ಮನವಿ ಸಲ್ಲಿಸುತ್ತೇವೆ ಎಂದರು.
ಶಿವಮೊಗ್ಗದಲ್ಲಿ ಹಿಂದೂ-ಮುಸ್ಲಿಂಮರ ಆಸ್ತಿ ಹಾನಿ ಮಾಡಿದ್ದಾರೆ. ಕೇವಲ ಮುಸಲ್ಮಾನರ ಮನೆಗಳ ಮೇಲೆ ಕಲ್ಲು ತೋರಿಲ್ಲ, ಹಿಂದೂಗಳ ಮನೆಯ ಮೇಲೆ ಕೂಡ ಕಲ್ಲು ತೂರಿದ್ದಾರೆ. ಹೊರಗಿನವರು ಶಿವಮೊಗ್ಗಕ್ಕೆ ಬಂದು ಮಾಡಿರುವ ಕೃತ್ಯವಿದು.
ಹಿಂದೆ ಕೇರಳದಿಂದ ಬಂದು ವಿಶ್ವನಾಥ ಕೊಲೆ ಮಾಡಿದ್ದರು. ಈ ಕೊಲೆಯಲ್ಲೂ ಸಹ ಹೊರಗಿನವರ ಕೈವಾಡವೇ ಹೆಚ್ಚಿದೆ
ಅಂತ್ಯಸಂಸ್ಕಾರದ ವೇಳೆ ಸಹ ಗಲಾಟೆ ನಡೆಯಿತು. ಇದೆಲ್ಲದರ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಹೇಳಿದರು.
ಇದನ್ನು ಒದಿ : https://cnewstv.in/?p=8622
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments