Cnewstv.in / 21.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಮಗನ ಚಿತೆಗೆ ತಂದೆಯಿಂದಲೇ ಅಗ್ನಿಸ್ಪರ್ಶ..
ಶಿವಮೊಗ್ಗ : ನೆನ್ನೆ ರಾತ್ರಿ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯಾಗಿದ್ದು, ಇಂದು ಅಂತ್ಯಕ್ರಿಯೆಯನ್ನು ವಿದ್ಯಾನಗರದ ರೋಟರಿ ಚಿತಾಗಾರದಲ್ಲಿ ನೆರವೇರಿಸಲಾಗುತ್ತಿದೆ.
ರೋಟರಿ ಚಿತಾಗಾರದಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮರಾಠ ಸಂಪ್ರದಾಯದಂತೆ ಹರ್ಷ ಅಂತ್ಯಕ್ರಿಯೆ ನೆರವೇರಲಿದ್ದು, ತಂದೆಯಿಂದಲೇ ಮಗನ ಚಿತೆಗೆ ಅಗ್ನಿಸ್ಪರ್ಶ ವಾಗಲಿದೆ.
ಹರ್ಷ ಶವಯಾತ್ರೆಯನ್ನು ಇಂದು ಮಧ್ಯಾಹ್ನ ಅವರ ಮನೆಯಿಂದ ನಗರದ ಪ್ರಮುಖ ರಸ್ತೆಗಳಾದ ಬಿ.ಎಚ್ ರಸ್ತೆ, ಗಾಂಧಿ ಬಜಾರ್, ಹೊಳೆ ಬಸ್ ಸ್ಟಾಪ್ ಮೂಲಕ ರೋಟರಿ ಚಿತಾಗಾರ ತಲುಪಿತು.
ಶವಯಾತ್ರೆಯಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ, ಸಾವಿರಾರು ಬಜರಂಗದಳದ ಕಾರ್ಯಕರ್ತರು, ಸ್ನೇಹಿತರು ಭಾಗವಹಿಸಿದ್ದರು.
ಇದನ್ನು ಒದಿ : https://cnewstv.in/?p=8619
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments