Cnewstv.in / 21.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಹರ್ಷ ಮೃತದೇಹ ಮೆರವಣಿಗೆ ವೇಳೆ ಕಲ್ಲುತೂರಾಟ, ಬೈಕ್ ಗಳಿಗೆ ಬೆಂಕಿ. ಮತ್ತೆ ಉದ್ವಿಗ್ನ ಪರಿಸ್ಥಿತಿ.
ಶಿವಮೊಗ್ಗ : ಹರ್ಷ ಮೃತದೇಹ ಮೆರವಣಿಗೆ ಆರಂಭವಾದ ಕೆಲವೇ ಕ್ಷಣಗಳಲ್ಲಿ ನಗರದ ಕೆಲವು ಕಡೆಗಳಲ್ಲಿ ಕಲ್ಲುತೂರಾಟ ನಡೆಸಲಾಗಿದೆ.
ಬಿ.ಹೆಚ್ ರಸ್ತೆಯಿಂದ ಸೀಗೆಹಟ್ಟಿ ಕಡೆ ಮೆರವಣೆಗೆ ತಿರುಗುವ ಸಂದರ್ಭದಲ್ಲಿ ಕೆಲವು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಹಲವು ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರು, ಬೈಕ್ ಗಳನ್ನು ಗ್ಲಾಸ್ ಸಂಪೂರ್ಣ ಪುಡಿ – ಪುಡಿಯಾಗಿದೆ.
ಉದ್ವಿಗ್ನ ಗುಂಪು ಬೈಕಿಗೆ ಬೆಂಕಿ ಹಚ್ಚಿದ್ದು, ಹಣ್ಣಿನಂಗಡಿಯನ್ನು ಸಂಪೂರ್ಣ ಜಖಂ ಮಾಡಿದ್ದಾರೆ. ಹಲವು ಮನೆಗಳ ಮೇಲು ಕಲ್ಲುತೂರಾಟ ನಡೆಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ ಮತ್ತೊಂದೆಡೆ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ಹರಸಾಹಸ ಪಡುತ್ತಿದ್ದಾರೆ..
ಇದನ್ನು ಒದಿ : https://cnewstv.in/?p=8606
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments