Cnewstv.in / 21.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಹರ್ಷ ಕೊಲೆ ಆರೋಪಿಗಳ ಸುಳಿವು ಸಿಕ್ಕದ್ದು, ಸದ್ಯದಲ್ಲೇ ಪೊಲೀಸರು ಹೆಡೆಮುರಿ ಕಟ್ಟಲಿದ್ದಾರೆ : ಗೃಹಸಚಿವ ಆರಗ ಜ್ಞಾನೇಂದ್ರ.
ಶಿವಮೊಗ್ಗ : ನೆನ್ನೆ ರಾತ್ರಿ ಹಿಂದೂ ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆಗೆ ಸಂಬಂಧಿಸಿದಂತೆ ಇಂದು ಗೃಹ ಸಚಿವರಾದ ಅರಗ ಜ್ಞಾನೇಂದ್ರ ಪತ್ರಿಕಾಗೋಷ್ಠಿಯನ್ನು ನಡೆಸಿದರು.
ಇಂದು ಬೆಳಗ್ಗೆ ಹಿರಿಯಾ ಅಧಿಕಾರಿಗಳ ಜೊತೆ ಒಂದು ಸುತ್ತು ಮಾತುಕತೆ ನಡೆಸಿದೆವೆ. ಹಾಗೂ ಅವರಿಂದ ಮಾಹಿತಿಯನ್ನು ಪಡೆದಿದ್ದೇನೆ. ಇನ್ನೂ ಆರೋಪಗಳ ಸುಳಿವು ಸಿಕ್ಕದ್ದು, ಸದ್ಯದಲ್ಲೇ ಪೊಲೀಸರು ಹೆಡೆಮುರಿ ಕಟ್ಟಲಿದ್ದಾರೆ ಎಂದರು.
ಇಂದು ಬೆಳಿಗ್ಗೆ ಹರ್ಷ ರವರ ಮೃತದೇಹವನ್ನು ನೋಡಿಕೊಂಡು ಬಂದಿದ್ದೇನೆ. ಅವರ ಕುಟುಂಬದವರಿಗೆ ಸಾಂತ್ವನ ಹೇಳಿದ್ದೇನೆ. ನಾಲ್ಕರಿಂದ ಐದು ಜನರು ಈ ಕೃತ್ಯವನ್ನು ನಡೆಸಿದ್ದಾರೆ ಎನ್ನಲಾಗುತ್ತಿದ್ದು,
ಈ ಪ್ರಕರಣದಲ್ಲಿ ಸ್ಪಷ್ಟವಾದ ಮೆಸೇಜ್ ನೀಡುತ್ತೇವೆ. ಯಾರು ಏನು ಬೇಕಾದರೂ ಮಾಡಿ, ಬಚಾವ್ ಆಗಬಹುದು ಎಂಬ ವಿಕೃತ ಭಾವನೆ, ಇನ್ನು ಮುಂದೆ ಆಗೋದಿಲ್ಲ ಎನ್ನುವ ಮೆಸೇಜ್ ನೀಡುತ್ತೇವೆ ಎಂದರು.
ಸಹಜವಾಗಿ ನಾವು ಇಂತಹ ಸಂದರ್ಭದಲ್ಲಿ ಭಾವುಕರಾಗುತ್ತಾರೆ. ಆದರೆ ಯಾರೂ ಕೂಡ ಧೈರ್ಯಕೇಡುವ ಅವಶ್ಯಕತೆ ಇಲ್ಲ. ಎಲ್ಲರೂ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಸಹಕರಿಸಬೇಕು ಎಂದು ಜನರಲ್ಲಿ ವಿನಂತಿಸಿದರು.
ಇದನ್ನು ಒದಿ : https://cnewstv.in/?p=8587
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments