Cnewstv.in / 20.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಬೈಕ್ ರ್ಯಾಲಿ ಮಾಡಿದ ಬಿಜೆಪಿಯ 75 ಕಾರ್ಯಕರ್ತರ ಮೇಲೆ ಸುಮೋಟೋ ಪ್ರಕರಣ ದಾಖಲು.
ಶಿವಮೊಗ್ಗ : ಬೈಕ್ ರಾಲಿ ಮಾಡಿದ್ದ ಮಹಾನಗರಪಾಲಿಕೆ ಸದಸ್ಯ ಸೇರಿದಂತೆ 75 ಜನ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದಾರೆ.
ಈಶ್ವರಪ್ಪನವರು ರಾಜೀನಾಮೆ ನೀಡಬೇಕು ಎಂಬ ಹೇಳಿಕೆ ನೀಡಿದ್ದನ್ನು ಖಂಡಿಸಿ, ಫೆ. 18 ರಂದು ರಾತ್ರಿ 8 ಗಂಟೆಗೆ ಸಚಿವ ಕೆ ಎಸ್ ಈಶ್ವರಪ್ಪ ನವರು ಅಭಿಮಾನಿಗಳು ಸಂಗೊಳ್ಳಿ ರಾಯಣ್ಣ ಸರ್ಕಲ್ ಮೂಲಕ ಗುಂಡ್ಡಪ್ಪ ಶೆಡ್ ವರೆಗೆ ಸುಮಾರು 40 ರಿಂದ 50 ಬೈಕ್ ಗಳಲ್ಲಿ, 144 ನಿಷೇದಾಜ್ಙೆ ಜಾರಿಯಲ್ಲಿದ್ದರೂ ಸಹ ನಿಷೇಧಾಜ್ಞೆ ಉಲ್ಲಂಘಿಸಿ, ಸುಮಾರು 75 ಜನರು ಗುಂಪುಗುಂಪಾಗಿ ಸೇರಿಕೊಂಡು, ಇಲಾಖೆಯ ಯಾವುದೇ ಪರವಾನಗಿಯನ್ನು ಪಡೆಯದೆ ಜಯಕಾರಗಳನ್ನು ಕೂಗುತ್ತಾ, ರ್ಯಾಲಿ ನಡೆಸಿದ್ದಾರೆ ಎಂದು ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ.
ರ್ಯಾಲಿಯ ನೇತೃತ್ವವನ್ನು ಅರುಣ್ ಕುಮಾರ್, ಪುರುಷೋತ್ತಮ್ ಹಾಗೂ ಮಹಾನಗರಪಾಲಿಕೆ ಸದಸ್ಯ ರಾಹುಲ್ ಬಿದರಿ ಅವರು ವಹಿಸಿಕೊಂಡಿದ್ದು. ಒಟ್ಟು 75 ಜನರ ಮೇಲೆ ಕೋಟೆ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಿಸಲಾಗಿದೆ.
ರಾಷ್ಟ್ರಧ್ವಜಕ್ಕೆ ಅವಮಾನ ಮಾಡಲಾಗಿದೆ ಎಂದು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ 15 ಜನ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸಹ ಸುಮೋಟೋ ಪ್ರಕರಣ
ದಾಖಲಾಗಿತ್ತು. ಇದೇ ಸಂಬಂಧ ನೆನ್ನೆ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಡಿಕೆ ಶಿವಕುಮಾರ್ ಅವರು ಕರೆ ಮಾಡಿ ಪ್ರಶ್ನಿಸಿದ್ದರು. ಇದೇ ಬೆನ್ನಲ್ಲೇ ಬೈಕ್ ರ್ಯಾಲಿ ನಡೆಸಿದ ಬಿಜೆಪಿ ಕಾರ್ಯಕರ್ತರು ಮೇಲು ಸಹ ಪ್ರಕರಣ ದಾಖಲಾಗಿದೆ.
ಒಟ್ಟಿನಲ್ಲಿ ನಿಯಮ ಉಲ್ಲಂಘನೆ ಮಾಡಿದ ಎರಡು ಪಕ್ಷದ ಕಾರ್ಯಕರ್ತರ ಮೇಲೆ ಕಾನೂನು ರೀತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಇದನ್ನು ಒದಿ : https://cnewstv.in/?p=8563
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
C News TV Kannada News Online in cnewstv