Cnewstv.in / 20.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಕೌಟುಂಬಿಕ ಕಲಹ : ನಡುರಾತ್ರಿ ಇಬ್ಬರ ಭೀಕರ ಕೊಲೆ.
ಶಿವಮೊಗ್ಗ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಡುರಾತ್ರಿ ಒಂದೇ ಮನೆಯ ಇಬ್ಬರ ಭೀಕರ ಕೊಲೆಯಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗದ ಸೂಳೆಬೈಲಿ ನಲ್ಲಿ ನಡುರಾತ್ರಿ 12ರ ಸುಮಾರಿಗೆ ಎರಡು ಕುಟುಂಬಗಳ ನಡುವೆ ಜಗಳವಾಗಿದೆ. ಅದೇ ವಿಚಾರ ನಂತರ ತಾರಕಕ್ಕೆ ಹೋಗಿ ಇಬ್ಬರ ಕೊಲೆಯಲ್ಲಿ ಅಂತ್ಯವಾಗಿದೆ.
ಮೃತನನ್ನು ಸಲೀಮ್ ಅಹ್ಮದ್ (22) ಹಾಗೂ ಅಬ್ದುಲ್ ದಸ್ತಗಿರಿ (23) ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಇನ್ನಷ್ಟು ಮಾಹಿತಿ ಬರಬೇಕಿದೆ.
ಇದನ್ನು ಒದಿ : https://cnewstv.in/?p=8555
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments